HomePage_Banner_
HomePage_Banner_

ಶಿರ್ಲಾಲು; ಸಂತ ಮರಿಯಮ್ಮನವರ ದೇವಾಲಯದ ವತಿಯಿಂದ ಮನೆ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಶಿರ್ಲಾಲು; ಸಿರೋ ಮಲಬಾರ್ ಸಭೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಜ್ಯುಬಿಲಿ ವರ್ಷಾಚರಣೆ ಪ್ರಯುಕ್ತ ಶಿರ್ಲಾಲು ಸಂತ ಮರಿಯಮ್ಮನವರ ದೇವಾಲಯದ ವತಿಯಿಂದ ಶಿರ್ಲಾಲು ಗ್ರಾಮದ ಮಾಣಿಲಬೈಲು ನಡುಗುಡ್ಡೆ ನಿವಾಸಿ ವಾಸು ಮತ್ತು ಉಷಾ ದಂಪತಿಗೆ 4 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿರ್ಸಿದ ಮನೆಯ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮವು ಆ. 24 ರಂದು ನಡೆಯಿತು.

ಹಲವು ವರ್ಷಗಳಿಂದ ಪಾಳು ಬಿದ್ದ ಮನೆಯಲ್ಲಿ ವಾಸಿಸುತ್ತಿದ್ದ ವಾಸು ಎಂಬವರ ಕುಟುಂಬಕ್ಕೆ ಶಿರ್ಲಾಲು ಸಂತ ಮರಿಯಮ್ಮನವರ ದೇವಾಲಯದ ಸದಸ್ಯರ ನೆರವಿನಿಂದ ಈ ಮನೆಯನ್ನು ಕಟ್ಟಿ ಕೊಡಲಾಯಿತು. 

ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ರಿಬ್ಬನ್ ಕತ್ತರಿಸುವ ಮುಖಾಂತರ ಮನೆಯನ್ನು ಉದ್ಗಾಟಿಸಿದರು. ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಬಿಷಪ್ ಲಾರೆನ್ಸ್ ಮುಕ್ಕುಯಿಯವರು ಮನೆಯ ಕೀಲಿಕೈಯನ್ನು ಹಸ್ತಾಂತರಿಸಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಮಾನ್ಯ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಪ್ರತಾಪಸಿಂಹ ನಾಯಕ್ ರನ್ನು ಶಿರ್ಲಾಲು ಸಂತ ಮರಿಯಮ್ಮನವರ ದೇವಾಲಯದ ವತಿಯಿಂದ ಸನ್ಮಾನಿಸಲಾಯಿತು. ಶಿರ್ಲಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ, ಆಡಳಿತಾಧಿಕಾರಿ ಸುಧಾಕರ್ ಎಂ.ಹೆಚ್,ಪಿಡಿಒ ರಾಜು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.