ಧರ್ಮಯಾನ ಗ್ರಂಥ ಅನಾವರಣ

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಹೆಗ್ಗಡೆಯವರಾಗಿ ಸಂದ 50 ವರ್ಷಗಳ ಸವಿನೆನಪಿಗಾಗಿ ಸುವರ್ಣ ಮಹೋತ್ಸವ ಸಮಿತಿಯಿಂದ ರಚಿಸಲಾದ ಅಭಿನಂದನಾ ಗ್ರಂಥ ‘ಧರ್ಮಯಾನ’ ಈ ಗ್ರಂಥವನ್ನು ಆಯ್ದ ಆಮಂತ್ರಿತರ ಎದುರು ಸಮಿತಿಯ ಅಧ್ಯಕ್ಷ ಶ್ರೀ ಡಿ. ಹರ್ಷೇಂದ್ರ ಕುಮಾರ್‌ರವರು, ಶ್ರೀಮತಿ ಮತ್ತು ವೀರೇಂದ್ರ ಹೆಗ್ಗಡೆಯವರಿಗೆ ಸಮರ್ಪಿಸಿದರು. ಸುಮಾರು 250 ಪುಟಗಳುಳ್ಳ ಧರ್ಮಯಾನ ಅಭಿನಂದನಾ ಗ್ರಂಥದಲ್ಲಿ 180 ಬಿಡಿಲೇಖನಗಳಿದ್ದು, ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶುಭ ಸಂದೇಶಗಳಿವೆ. 

ಸಂಪುಟವನ್ನು ಸ್ವೀಕರಿಸಿದ ಧರ್ಮಾಧಿಕಾರಿ ಶ್ರೀ ಹೆಗ್ಗಡೆಯವರು ಕ್ಷೇತ್ರವು “ಪರಂಪರಾನುಗತವಾಗಿ ಕಟ್ಟುಕಟ್ಟಳೆಯ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದರೂ, ಜನ ಸಾಮಾನ್ಯರೊಂದಿಗೆ ಬೆರೆತುಕೊಂಡಿದೆ. ಆದುದರಿಂದ ಸಾಮಾಜಿಕ ಚಿಂತನೆಗಳನ್ನು ಬೆಳೆಸಿಕೊಳ್ಳಲು ತನಗೆ ಸಾಧ್ಯವಾಯಿತು. ತಾನು ಮಾಡಿರುವ ಕೆಲಸಗಳಲ್ಲಿ ಹೆಚ್ಚಿನವು ಪರಂಪರೆಯಿಂದ ಬಂದವುಗಳಾದರೂ, ಕೆಲವೊಂದನ್ನು ತನ್ನ ಅನುಭವದಲ್ಲಿ ಜಾರಿಗೆ ತರಲು ಸಾಧ್ಯವಾಗಿದೆ. ಆದರೂ ನಾನು ಇದುವರೆಗೆ ಸಾಧಿಸಿದ್ದು ಕಡಿಮೆ ಎಂಬ ವಿನಮ್ರತೆ ನನ್ನಲ್ಲಿದೆ” ಎಂದು ಅವರು ನುಡಿದರು. ವಿವೇಕ್ ರೈಯವರ ಸಮ್ಮುಖದಲ್ಲಿ ಧರ್ಮಯಾನ ಗ್ರಂಥದ ಕರಡು ಪ್ರತಿಯನ್ನು ಕೆಲಸಮಯದ ಹಿಂದೆ ಬಿಡುಗಡೆ ಮಾಡಿದ್ದನ್ನು ಸ್ಮರಿಸಿಕೊಳ್ಳುತ್ತಾ ಈ ಪ್ರಯತ್ನದಲ್ಲಿ ತೊಡಗಿಕೊಂಡಿರುವವರೆಲ್ಲರನ್ನು ಅಭಿನಂದಿಸಿದರು. ಸುವರ್ಣ ಸಮಿತಿಯ ಸಂಚಾಲಕ ಶ್ರೀನಾಥ್‌ರವರು ಧನ್ಯವಾದ ಸಮರ್ಪಣೆಗೈದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.