ಬೆಳ್ತಂಗಡಿ: ಟೈಲರ್‍ಸ್ ಸಹಕಾರ ಸಂಘದ ವಿಸ್ತರಣೆಗೊಂಡ ಕಛೇರಿ ಉದ್ಘಾಟನೆ

ಬೆಳ್ತಂಗಡಿ: ಬೆಳ್ತಂಗಡಿ ಟೈಲರ್‍ಸ್ ಸಹಕಾರ ಸಂಘವು ಬೆಳ್ತಂಗಡಿ ಪಿಂಟೋ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿದ್ದು, ಇದರ ವಿಸ್ತರಣೆಗೊಂಡ ಕಛೇರಿಯ ಉದ್ಘಾಟನಾ ಸಮಾರಂಭವು ಆ.೨೪ ರಂದು ಜರುಗಿತು

ಶಾಸಕ ಹರೀಶ್ ಪೂಂಜ ಕಚೇರಿಯನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಭದ್ರತಾ ಕೊಠಡಿಯನ್ನು ಪಿಂಟೋ ಕಾಂಪ್ಲೆಕ್ಸ್‌ನ ಮಾಲಕರಾದ ಐವನ್ ಜೇಮ್ಸ್ ಪಿಂಟೋ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವಲೇರಿಯನ್ ರೊಡ್ರಿಗಸ್ ವಹಿಸಿದ್ದರು.
ಸಂಘದ ನಿರ್ದೇಶಕರು, ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಲೇರಿಯನ್ ರೋಡ್ರಿಗಸ್‌ರವರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.