ಉಜಿರೆಯ ಉದ್ಯಮಿ ಹಮೀದ್ ಕ್ಯೂಟಿಎಫ್ ಹೃದಯಾಘಾತದಿಂದ ನಿಧನ

ಉಜಿರೆ; ಇಲ್ಲಿನ‌ ನಿವಾಸಿ, ಕ್ಯೂಟಿಎಫ್ ಚಹಾ ಹುಡಿ ವ್ಯಾಪಾರಸ್ತ ಹಿರಿಯ ಉದ್ಯಮಿ ಹಮೀದ್(57ವ.)ಅವರು ಆ.‌21 ರಂದು ಮಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೂರು ದಿನಗಳಿಂದ ಆರೋಗ್ಯದಲ್ಲಿ ಏರುಪೇರಾಗಿದ್ದುದರಿಂದ ಅವರನ್ನು ಆ.21 ರಂದು ಸಹೋದರ ಇಬ್ರಾಹಿಂ ಕ್ಯೂಟಿಎಫ್ ಮತ್ತಿತರರು ಕೆಎಂಸಿ ಆಸ್ಪತ್ರೆಗೆ ಕರೆದೊಯ್ದಿದ್ದರು.
ಇಲ್ಲಿ ವೈದ್ಯಕೀಯ ಪರೀಕ್ಷೆ ವೈದ್ಯರು ಸ್ವಲ್ಪ ಮಧುಮೇಹ ಅಧಿಕಗೊಂಡಿರುವುದು ಮತ್ತು ಕೊಲೆಸ್ಟ್ರಾಲ್ ಸಮಸ್ಯೆ ಇರುವ ಬಗ್ಗೆ ಪೂರಕ ಔಷಧಿ ನೀಡಿ, ದಾಖಲಾಗುವ ಆವಶ್ಯಕತೆ ಇಲ್ಲ ಎಂದು ಸಲಹೆ ನೀಡಿದ್ದರು.‌ ಅಲ್ಲಿಂದ ಹೊರಟು ತಮ್ಮ ಕಾರಿನಲ್ಲಿ ಕುಳಿತುಕೊಂಡಿರುವಂತೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿ ಅವರು ಅಸುನೀಗಿದರು.

ಮೃತರು ಪತ್ನಿ, ಇಬ್ಬರು ಗಂಡು ಮತ್ತು ಓರ್ವೆ ಹೆಣ್ಣು ಮಕ್ಕಳು ಹಾಗೂ ಸಹೋದರ-ಸಹೋದರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.