ಅ.19 ರಂದು ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಬೆಳ್ತಂಗಡಿ ವಲಯದ ಹಿರಿಯ ಛಾಯಾಗ್ರಾಹಕ ನಿರಂಜನ ಪೂಂಜಾ ಅವರಿಗೆ ಸನ್ಮಾನ

ಬೆಳ್ತಂಗಡಿ: ಸೌತ್ ಕೆನರಾ ಫೋಟೊಗ್ರಾಪರ್ಸ ಅಸೋಸಿಯೇಷನ್ ದ ಕ ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ ವತಿಯಿಂದ ಅ.19 ರಂದು ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಬೆಳ್ತಂಗಡಿ ವಲಯದ ಹಿರಿಯ ಛಾಯಾಗ್ರಾಹಕ ನಿರಂಜನ ಪೂಂಜಾ ಕಡಿರುದ್ಯಾವರ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷ ಸುರೇಶ್ ಬಿ ಕೌಡಂಗೆ, ಗೌರವಾಧ್ಯಕ್ಷ ಎನ್ ಎ ಗೋಪಾಲ್ ಅಳದಂಗಡಿ, ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ ಸುವರ್ಣ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಕಿರಣ್ ಕುಮಾರ್ ಅಳದಂಗಡಿ, ದ ಕ ಉಡುಪಿ ಜಿಲ್ಲಾ ಛಾಯಾಗ್ರಾಹಕ ಸಂಘದ ಮಾಜಿ ಅಧ್ಯಕ್ಷ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ , ವಲಯದ ಪ್ರಧಾನ ಕಾರ್ಯದರ್ಶಿಗಂಗಾಧರ ಉಜಿರೆ, ಕೋಶಾಧಿಕಾರಿ ಪ್ರಭಾಕರ ಕಕ್ಕಿಂಜೆ, ವಲಯದ ಮಾಜಿ ಅಧ್ಯಕ್ಷರು, ಪಧಾದಿಕಾರಿಗಳು, ವಲಯದ ಸರ್ವಸದಸ್ಯರು ಉಪಸ್ಥಿತರಿದ್ದರು. ಕೆ ವಸಂತ್ ಶರ್ಮ ಉಜಿರೆ ಸನ್ಮಾನಿತರ ಪರಿಚಯ ಓದಿದರು. ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ ವಿಶ್ವ ಛಾಯಾಗ್ರಹಣ ದಿನದ ಶುಭಾಶಯ ಹೇಳಿದರು. ವಲಯದ ಅಧ್ಯಕ್ಷ ಸುರೇಶ್ ಬಿ ಕೌಡಂಗೆ ಸ್ವಾಗತಿಸಿ, ವಲಯದ ಪತ್ರಿಕಾ ಪ್ರತಿನಿಧಿ ಉಮೇಶ್ ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು ನಂದಕುಮಾರ್ ಪ್ರಾರ್ಥನೆ ಗೈದರು ಕಾರ್ಯದರ್ಶಿ ಗಂಗಾಧರ ಉಜಿರೆ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.