ಚಾರ್ಮಾಡಿ ಘಾಟಿ; ಕಾರಿನಲ್ಲಿ ಮೃತ ದೇಹ ಪತ್ತೆ; ಪತ್ನಿ ಕಳೆದುಕೊಂಡು ಬೇಸತ್ತ ಹಿನ್ನಲೆ ಆತ್ಮಹತ್ಯೆ

ಬೆಳ್ತಂಗಡಿ: ಚಾರ್ಮಾಡಿ ಘಾಟಿನಲ್ಲಿ ಕಾರಿನಲ್ಲಿಯೇ ವಿಷ ಸೇವಿಸಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಆ.19 ರಂದು ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಲೆಮಾರುತ ಬಳಿ ಕಾರಿನ ಡೈವಿಂಗ್ ಸೀಟಿನಲ್ಲಿ ಕುಳಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಈ ಕಾರು ಆ.18ರಂದು ಸಂಜೆ ಇದ್ದು ಆದರೆ ಘಟನೆ  ಮರುದಿನ ಆ.19 ರಂದು ಬೆಳಕಿಗೆ ಬಂದಿದೆ.

ಕೆ.ಎ -05 ಎಮ್.ಜೆ 4877 ಕ್ವಿಡ್ ಕಾರಿನಲ್ಲಿಯೇ ಮೃತದೇಹ ಪತ್ತೆಯಾಗಿದ್ದು ಕಾರಿನ ಪಕ್ಕ ರಸ್ತೆಯಲ್ಲಿ ವಿಷದ ಬಾಟಲಿ ಕಾರಿನ ಡಿಕ್ಕಿಯಲ್ಲಿ ಮೊಬೈಲ್ ಪತ್ತೆಯಾಗಿದೆ. ಮತ್ತು ಜು.31 ರಂದು ಬರೆದ ಪತ್ರದಲ್ಲಿ ಹೆಂಡತಿ ಕಳೆದುಕೊಂಡು ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬರೆದಿದ್ದರು. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.