HomePage_Banner_
HomePage_Banner_

ಸರಕಾರಿ ಶಾಲೆಯ‌ ಸೋಲಾರ್ ದೀಪ‌ ನಾಪತ್ತೆ!

ಪಿಲಿಗೂಡು: ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ‌ಪಿಲಿಗೂಡು ಸ.ಹಿ.ಪ್ರಾ. ಶಾಲೆ ಆವರಣದಲ್ಲಿದ್ದ ಸೌರ ದೀಪ‌ ರಿಪೇರಿ ನೆಪದಲ್ಲಿ‌‌ ಒಂದು‌ ತಿಂಗಳಿಂದ ನಾಪತ್ತೆಯಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ‌ ಕಾರಣವಾಗಿದೆ.‌ ಕಣಿಯೂರು ಗ್ರಾ.ಪಂ. ವತಿಯಿಂದ‌ 2018ರ ಡಿಸೆಂಬರ್‌ನಲ್ಲಿ ಪಿಲಿಗೂಡು ಸರಕಾರಿ ಶಾಲೆ ಆವರಣಕ್ಕೆ ಸೌರ ದೀಪವನ್ನು ‌ಮಂಜೂರು‌ ಮಾಡಿಸಿ, ಶಾಲಾ ವಾರ್ಷಿಕೋತ್ಸವದಂದು ಶಾಸಕರಾದ ಹರೀಶ್ ಪೂಂಜಾ ಅವರಿಂದ ಉದ್ಘಾಟನೆಯನ್ನೂ ಮಾಡಿಸಲಾಗಿತ್ತು. ಇದಾಗಿ‌ ಸುಮಾರು ‌2 ತಿಂಗಳ‌ ಬಳಿಕ ಈ ಸೌರದೀಪ ಕೆಟ್ಟು ಹೋಗಿದ್ದು, ರಿಪೇರಿ ಮಾಡಿಸಿ, ಅಳವಡಿಸಲಾಯಿತು. ಇದೀಗ ದೀಪ ಅಳವಡಿಸಿ 2 ವರ್ಷ ಕಳೆಯುವ ಮುಂಚಿತವಾಗಿ ರಿಪೇರಿ ನೆಪದಲ್ಲಿ ಮತ್ತೆ ಕೊಂಡೊಯ್ಯಲಾಗಿದೆ. 2020ರ ಜುಲೈನಲ್ಲಿ ಈ ಸೌರ ದೀಪ ಹಾಗೂ‌‌ ಸೌರ ಫಲಕವನ್ನು ಶಾಲಾಭಿವೃದ್ಧಿ ಸಮಿತಿ ಅಥವಾ ಮುಖ್ಯೋಪಾಧ್ಯಾಯರ ಗಮನಕ್ಕೂ ತಾರದೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ಸ್ಥಳೀಯರು ಹಾಗೂ‌ ಶಾಲೆಯ ಹಳೆ ವಿದ್ಯಾರ್ಥಿಗಳು ಮುಖ್ಯಶಿಕ್ಷಕರ ಬಳಿ ವಿಚಾರಿಸಿದ್ದು, ಮುಖ್ಯಶಿಕ್ಷಕರು ಸಂಬಂಧ ಪಟ್ಟ ಅಧಿಕಾರಿಗಳನ್ನು ವಿಚಾರಿಸಿದಾಗ ರಿಪೇರಿಗಾಗಿ‌ ಕೊಂಡೊಯ್ದಿರುವ ಮಾಹಿತಿ ಲಭಿಸಿದೆ. ಆದರೆ ಕೊಂಡೊಯ್ದು ತಿಂಗಳು ಕಳೆದರೂ ಇನ್ನೂ ದುರಸ್ತಿ ಮುಗಿದಿಲ್ಲವೇ..? ಕನಿಷ್ಠ 2 ವರ್ಷವೂ ಸರಿಯಾಗಿ ಕಾರ್ಯನಿರ್ವಹಿಸದ, ಇಂತಹ ಕಳಪೆ ಸೌರ ದೀಪಗಳನ್ನು ಸರಕಾರ ಖರೀದಿಸುವುದಾದರೂ ಯಾಕೆ ಎಂಬ ಪ್ರಶ್ನೆ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ‌ಶಾಲಾಭಿವೃದ್ಧಿ ಸಮಿತಿಯದ್ದಾಗಿದೆ. ರಾಜ್ಯ ಹೆದ್ದಾರಿ ‌ಬಳಿ ಶಾಲೆಯಿದ್ದು ರಾತ್ರಿ ವೇಳೆ ಯಾರಾದರೂ ಅನಾಮಿಕರು ಅಕ್ರಮ ಕಾರ್ಯಕ್ಕೆ ಬಳಸಿಕೊಂಡಲ್ಲಿ ಅಥವಾ ಮಳೆಗಾಲದಲ್ಲಿ ಕತ್ತಲು ಆವರಿಸುವುದರಿಂದ ಸೋಲಾರ್ ದೀಪ ಅತ್ಯಗತ್ಯವಾಗಿದೆ. ಸಂಬಂಧಪಟ್ಟವರು ಕೂಡಲೇ ಕ್ರಮಕೈಗೊಳ್ಳದಿದ್ದಲ್ಲಿ‌ ಪೊಲೀಸ್ ಇಲಾಖೆಗೆ ದೂರು ನೀಡುವ ಸಂದರ್ಭ ಎದುರಾಗಬಹುದು ಎಂದು ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.