ಉಜಿರೆ ರಮ್ಯಾ1 ಗ್ರಾಂ ಗೋಲ್ಡ್ & ಪ್ಯಾನ್ಸಿ ಅರ್ಪಿಸುವ ಭಾಷಣ ಸ್ಪರ್ಧೆ

❇️ 2021 ಭಾರತದ ಸವಾಲುಗಳ ವಿಷಯದ ಬಗ್ಗೆ
❇️ ಬೆಳ್ತಂಗಡಿ ತಾಲೂಕು ಮಟ್ಟದ ಮುಕ್ತ ಆನ್ಲೈನ್ ಭಾಷಣ ಸ್ಪರ್ಧೆ
ಉಜಿರೆ: ಕಳೆದ ಹಲವು ವರ್ಷಗಳಿಂದ ಉಜಿರೆ ಹಾಗೂ ಕಕ್ಕಿಂಜೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಮ್ಯಾ 1 ಗ್ರಾಂ ಗೋಲ್ಡ್ & ಪ್ಯಾನ್ಸಿ ಸಂಸ್ಥೆಯು ಅರ್ಪಿಸುವ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ 2021 ಭಾರತದ ಸವಾಲುಗಳ ವಿಷಯದ ಬಗ್ಗೆ ಬೆಳ್ತಂಗಡಿ ತಾಲೂಕು ಮಟ್ಟದ ಮುಕ್ತ ಆನ್ಲೈನ್ ಭಾಷಣ ಸ್ಪರ್ಧೆ ನಡೆಯಲಿದೆ.
ಇದೊಂದು ಮುಕ್ತವಾದ ಸ್ಪರ್ಧೆಯಾಗಿದ್ದು ಯಾರು ಕೂಡ ಭಾಗವಹಿಸಲು ಅವಕಾಶವಿದೆ,ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಭಾಷಣವನ್ನು ವಿಡಿಯೋ ಮಾಡಿ 9901728588 ನಂಬರಿಗೆ ಆಗಸ್ಟ್ 30 ರ ಒಳಗೆ ಕಳುಹಿಸಿಕೊಡಬೇಕು, ಸಮಯದ ಮಿತಿ 2+1 ಇದ್ದು ವಿಷಯ, ಭಾಷಾ ಪ್ರೌಡಿಮೆ, ಪ್ರಸ್ತುತಿ, ಒಟ್ಟು ಪ್ರಭಾವವನ್ನು ಫಲಿತಾಂಶ ತೆಗೆದುಕೊಂಡು ವಿಜೇತರನ್ನು ಗುರುತಿಸಿ ಪ್ರಥಮ, ದ್ವೀತಿಯ, ತೃತೀಯ ಪ್ರಶಸ್ತಿ ಹಾಗೂ ಟ್ರೋಫಿ ಮತ್ತು 7 ಸಮಾಧಾನಕರ ಬಹುಮಾನವನ್ನು ನೀಡಲಾಗುವುದು ಎಂದು ಆಯೋಜಕ ಪ್ರಸಾದ್ ಬಿ.ಎಸ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.