ಕಳಿಯ ಗ್ರಾ.ಪಂ.ನ ಕುಂಟಿನಿಯಲ್ಲಿ ರೋಜ್ ಗಾರ್ ದಿವಸ್ ಆಚರಣೆ ಹಾಗೂ ಆರೋಗ್ಯ ಜಾಗೃತಿ-ಮಾಹಿತಿ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ಗೇರುಕಟ್ಟೆ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ರೋಜ್ ಗಾರ್ ದಿವಸ್ ಆಚರಣೆ, ಮಾಹಿತಿ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮವು ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಟಿನಿ ಅಂಗನವಾಡಿ ಕೇಂದ್ರದಲ್ಲಿ ಇಂದು ನಡೆಯಿತು.
ಮಳೆಗಾಲದ ಈ ಸಮಯದಲ್ಲಿ ಕೊರೊನಾ, ಡೆಂಗ್ಯು ಹಾಗೂ ಮಲೇರಿಯಾದಂತಹ ಮಾರಕ ಖಾಯಿಲೆಗಳ ಬಗ್ಗೆ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ, ಪಡಂಗಡಿ ವಲಯದ ಆರೋಗ್ಯ ಸಹಾಯಕಿ ಶ್ರೀಮತಿ ಶಕುಂತಲಾ ಸ್ಥಳೀಯ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದರು. ಹಾಗೂ ಭಯಬಿಟ್ಟು ನಿರ್ಭೀತಿಯಿಂದ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಬಳಿಕ ಮಾತನಾಡಿದ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಮೇಲ್ವಿಚಾರಕಿ ಯಶೋಧ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಗ್ರಾಮಸ್ಥರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಇನ್ನು ಸರ್ಕಾರದ ಮಹತ್ವದ ಯೋಜನೆಯಾದ ಮಹತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ತಾಲೂಕು ಐಇಸಿ ಸಂಯೋಜಕಿ ಸುನೀತಾ ಅವರು ಮಾಹಿತಿ ಹಂಚಿಕೊಂಡು, ಉದ್ಯೋಗ ಚೀಟಿ ಮಾಡಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದ ಕಳಿಯ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್ ಅವರು ಉದ್ಯೋಗ ಚೀಟಿ ವಿತರಿಸಿದರು. ಕಾರ್ಯದರ್ಶಿ ಕುಂಞಿ ಕೆ, ಆಶಾ ಕಾರ್ಯಕರ್ತೆ ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಸ್ಥಳೀಯ ಗ್ರಾಮಸ್ಥರು ಜಾಗೃತಿ ಹಾಗೂ ಮಾಹಿತಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು  ಪಂಚಾಯತ್ ಸಿಬ್ಬಂದಿಗಳಾದ ಸುರೇಶ್ ಗೌಡ, ರವಿ.ಹೆಚ್ ಹಾಗು ನಂದಿನಿ‌ ರೈ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.