ಗೇರುಕಟ್ಟೆ,ಎಸ್ಸೆಸ್ಸಫ್ ಗುರುವಾಯನಕೆರೆ ಸೆಕ್ಟರ್,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಸಹಯೋಗದೊಂದಿಗೆ ರಕ್ತದಾನ ಶಿಬಿರ,ಆಯುಷ್ಮಾನ್ ಕಾರ್ಡ್ ಅಭಿಯಾನ

ಗೇರುಕಟ್ಟೆ : ಇಲ್ಲಿಯ ಎಸ್ಸೆಸ್ಸಫ್ ದ‌‌.ಕ ಜಿಲ್ಲಾ ಬ್ಲಡ್ ಸೈಬೊ ಇದರ 171 ನೇ ರಕ್ತದಾನ ಶಿಬಿರ ಮತ್ತು ಆಯುಷ್ಮಾನ್ ಕಾರ್ಡ್ ಅಭಿಯಾನವು ಆ.16 ರಂದು ಗೇರುಕಟ್ಟೆ ಮನ್ಶರ್ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಪರಪ್ಪು ಜುಮ್ಮಾ ಮಸ್ಜಿದ್ ಖತೀಬ್ ಉಸ್ತಾದ್ ಉಮರುಲ್ ಫಾರೂಕ್ ಸಖಾಫಿಯವರು ಉದ್ಘಾಟನೆಯನ್ನು ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸೆಕ್ಟರ್ ಅಧ್ಯಕ್ಷರಾದ ಜಮಾಲುದ್ದೀನ್ ಮದನಿ ರವರು ಸಭಾ ಅಧ್ಯಕ್ಷತೆ ವಹಿಸಿದ್ದರು.


ಭವ್ಯ ಭಾರತದ ಸಹೋದರತೆಯ‌ ಕನಸುಗಳನ್ನು ಈಡೇರಿಸುವಲ್ಲಿ ನಾವು ಮುಂದಾಗಬೇಕು ಎಂದು ಎಸ್ಸೆಸ್ಸಫ್ ದ‌.ಕ ಜಿಲ್ಲಾ ಕೋಶಾಧಿಕಾರಿ ಮಹಮ್ಮದ್ ಅಲೀ ತುರ್ಕಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ರಕ್ತದ ಅವಶ್ಯಕತೆ ಬಂದಾಗ ಯಾವುದೇ ಜಾತಿ ಧರ್ಮಗಳನ್ನು ನೋಡದೆ ಕೇವಲ ರಕ್ತದ ಗುಂಪುನ್ನು ಮಾತ್ರ ಪರಿಗಣಿಸುತ್ತಾರೆ.ಹಾಗಾಗಿ ರಕ್ತದಾನ ಅತೀ ಶ್ರೇಷ್ಠ ದಾನ ಎಂದು ಮುಖ್ಯ ಅತಿಥಿ ಗೇರುಕಟ್ಟೆ ಸ.ಪ‌.ಪೂರ್ವ ಕಾಲೇಜು ಉಪನ್ಯಾಸಕಾರಾಗಿರುವ ಕೇಶವ ಬಂಗೇರ ರವರು ಶುಭ ಹಾರೈಸುತ್ತಾ ಹೇಳಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸಫ್ ರಾಜ್ಯಾಧ್ಯಕ್ಷರು ಮತ್ತು ಮನ್ಶರ್ ಸಂಸ್ಥೆಯ ಚೆಯ್ಯರ್ ಮನ್ ಅಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ರವರು, ಎಸ್ಸೆಸ್ಸಫ್ ದ.ಕ ಜಿಲ್ಲಾಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಳ, ಜಿಲ್ಲಾ ಸದಸ್ಯರಾಗಿರುವ ಇಕ್ಬಾಲ್ ಮಾಚಾರ್, ದ‌.ಕ ಬ್ಲಡ್ ಸೈಬೋ ಇದರ ವೈಸ್ ಚೆಯ್ಯರ್ ಮನ್ ನವಾಝ್ ಸಖಾಫಿ ಅಡ್ಯಾರ್ ಪದವು, ಝೋನ್ ಅಧ್ಯಕ್ಷರಾಗಿರುವ ಅಯ್ಯೂಬ್ ಮಹ್ಳರಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ, ಮನ್ಸ್ಯರ್ ಪ್ಯಾರಮೆಡಿಕಲ್ ಪ್ರಾಂಶುಪಾಲು ಹೈದರ್ ಮರ್ದಾಳ, ಜ್ಯೋತಿ ಶಾಮಿಯಾನ ಮಾಲೀಕ ಹರೀಶ್ ಕುಮಾರ್, ಬೆಳ್ತಂಗಡಿ ” ಸುದ್ದಿ ಪತ್ರಿಕೆ” ವರದಿ ಪ್ರತಿನಿಧಿ ಕೆ.ಎನ್.ಗೌಡ, ಎಸ್.ಎಮ್.ಎ.ಹಾಗೂ ಎಸ್.ಜೆ.ಎಮ್. ಬೆಳ್ತಂಗಡಿ ಪ್ರ‌ಧಾನ ಕಾರ್ಯದರ್ಶಿ ಎನ್.ಎಮ್. ಶರೀಫ್ ಸಖಾಫಿ ನೆಕ್ಕಿಲ್,ಎಸ್ಸೆಸ್ಸಫ್ ದ.ಕ ಬ್ಲಡ್ ಸೈಬೋ ಸಂಚಾಲಕರಾಗಿರುವ ಕರೀಂ ಕದ್ಕಾರ್,ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಬೆರ್ಕಳ, ಬೆಳ್ತಂಗಡಿ ಡಿವಿಶನ್ ಕಾರ್ಯದರ್ಶಿ ಶರೀಫ್ ನಾವೂರು, SMA ರಾಜ್ಯ ಉಪಾಧ್ಯಕ್ಷರಾದ ಎ.ಕೆ ಅಹ್ಮದ್ ಎರುಕಡುಪು, ಡಿವಿಶನ್ ಉಪಾಧ್ಯಕ್ಷರಾದ ಕರೀಂ ಸಖಾಫಿ, SYS ನಾಯಕರಾದ ಹಾಫಿಝ್ ಹನೀಫ್ ಮಿಸ್ಬಾಹಿ & ಅಬೂಸ್ವಾಲಿಹ್ ಪರಪ್ಪು ಹಾಗೂ SYS SSF ಡಿವಿಶನ್, ಸೆಕ್ಟರ್, ಯುನಿಟ್ ಮಟ್ಟದ ಸಂಘಟನಾ ಮತ್ತು ರಾಜಕೀಯ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.ಹಾಗೂ ಆಯುಷ್ಮಾನ್ ಕಾರ್ಡ್ ಅಭಿಯಾನ ಮತ್ತು ಸೆಕ್ಟರ್ ವ್ಯಾಪ್ತಿಯ ಮೂರು ಎಸ್ಸೆಸ್ಸಲ್ಸಿ ಸಾಧಕರಿಗೆ ಹಾಗೂ ನೂತನ‌ ವೈಜ್ಞಾನಿಕ ಮಾದರಿಯ ಉತ್ಪನ್ನವನ್ನು ಪರಿಚಯಿಸಿದ ಸುನ್ನತ್ ಕೆರೆಯ ಒಬ್ಬ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.


ಉಡುಪಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಶ್ರೀಮತಿ ಹಾಜಿರಾ ಹೈದರ್ ರಕ್ತ ದಾನದಲ್ಲಿ ಭಾಗಿಯಾದರು.ಸುಮಾರು 135 ಕ್ಕೂ ಹೆಚ್ಚು ಜನರು ಸ್ವಇಚ್ಛೆಯಿಂದ ರಕ್ತದಾನ ಮಾಡುವ ಮೂಲಕ ಯಶಸ್ವಿಗೊಳಿಸಲು ಸಹಕರಿಸಿದರು.ಸೆಕ್ಟರ್ ಕಾರ್ಯದರ್ಶಿ ಫಯಾಝ್ ಗೇರುಕಟ್ಟೆ ಸ್ಚಾಗತಿಸಿ, ನಾಸಿರ್ ಜಾರಿಗೆಬೈಲು ವಂದಿಸಿದರು,ಸಿದ್ದೀಕ್ ಜಾರಿಗೆಬೈಲು ಕಾರ್ಯಕ್ರಮ‌ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.