ಕೊಕ್ಕಡ; ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ 74ನೇ ಸ್ವಾತಂತ್ರ್ಸೋತ್ಸವ ಆಚರಣೆ

ಕೊಕ್ಕಡ; ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ 74ನೇ ಸ್ವಾತಂತ್ರ್ಸೋತ್ಸವ ಕೊಕ್ಕಡದ ಹಿಂದೂ ರುದ್ರ ಭೂಮಿಯ ವಠಾರದ ಸ್ವಚ್ಛತಾಕಾರ್ಯಕ್ರಮ ಮಾಡಲಾಯಿತು. ಆವರಣದಲ್ಲಿ ಇದ್ದ ಗಿಡ ಗಂಟ್ಟಿಗಳನ್ನು ಕಡಿದು ಸ್ವಚ್ಛ ಗೊಳಿಸಲಾಯಿತು. ಬಳಿಕ ರುದ್ರ ಭೂಮಿಯ ಸುತ್ತಲೂ ಗಿಡಗಳನ್ನು ನೆಡಲಾಯಿತು. ಶ್ರಮದಾನಿಗಳಿಗೆ ಕೊಕ್ಕಡ ಸಿ. ಎ ಬ್ಯಾಂಕ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಸಿಹಿ ನೀಡಿದರು. ಬಿಜೆಪಿ ಮಹಾಶಕ್ತಿ ಕೇಂದ್ರ ಧರ್ಮಸ್ಥಳದ ಅಧ್ಯಕ್ಷರು ಯೋಗೀಶ್ ಅಲಂಬಿಲ, ಕೊಕ್ಕಡ ಶಕ್ತಿ ಕೇಂದ್ರದ ಪ್ರಮುಖ್ ಜನಾರ್ದನ್ k. P , ಬಿಜೆಪಿ ತಾಲೂಕು ರೈತ ಮೋರ್ಚಾ ಸದಸ್ಯ ಜಗದೀಶ್ ಕೆಂಪಕೋಡಿ, ಬಿಜೆಪಿ ಹಿಂದುಳಿದ ವರ್ಗಗಳ ತಾಲೂಕು ಸದಸ್ಯ ರಾಘವ ಭಂಡಾರಿ, ಬೂತ್ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ ಕಡಿರ,  1ನೆ ಬೂತ್ ಕಾರ್ಯದರ್ಶಿ  ಅಶ್ವಿನಿ. ಮಾಜಿ ಪಂಚಾಯತ್ ಸದಸ್ಯ ಶೀನ ನಾಯ್ಕ್, ಕಾರ್ಯಕರ್ತರಾದ ಶೇಖರ್ ಗಾಣಗಿರಿ. ಕೇಶವ್ ಹಲ್ಲಿಂಗೇರಿ, ಗಣೇಶ್ ಸೌತಡ್ಕ, ಗಣೇಶ್ ಮುನ್ನಡ್ಕ, ಶ್ರಮದಾನದಲ್ಲಿ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.