ಗುರಿಪಳ್ಳ ಶಾಲೆಯಲ್ಲಿ 74ನೇ ಸ್ವಾತಂತ್ರ್ಯೋತ್ಸವ ಆಚರಣೆ

ಗುರಿಪಳ್ಳ ಆಗಸ್ಟ್ 15: ಸರಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜಯನಗರ ಗುರಿಪಳ್ಳ ಇಲ್ಲಿ 74ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಿತು, ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ಪ್ರ.ಕಾರ್ಯದರ್ಶಿ ಹಾಗೂ ಶಾಲಾ ಹಳೆ ವಿಧ್ಯಾರ್ಥಿಗಳಾದ ಗುರುರಾಜ್ ಪೂಜಾರಿ ಇವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ಸ್ವಾತಂತ್ರೋತ್ಸವದ ಬಗ್ಗೆ ಹಾಗೂ ಪ್ರಪಂಚಕ್ಕೆ ಕಂಟಕವಾದ ಕೋವಿಡ್ 19 ರಿಂದಾಗಿ ಜನಜೀವನ ದುಸ್ತರವಾಗಿದೆ. ಈ ವರ್ಷ ಸವಾಲುಗಳ ವರ್ಷ ನಾವೆಲ್ಲರೂ ಸೇರಿ ಈ ಸವಾಲನ್ನು ಸಮರ್ಥವಾಗಿ ಎದರಿಸಬೇಕು ಎಂದರು.

ಈ ಸಂಧರ್ಭದಲ್ಲಿ ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷರಾದ ಪ್ರಸಾದ್ ಕುಮಾರ್ ಮಾತನಾಡಿದರು, ಶಾಲಾ ಮುಖ್ಯಶಿಕ್ಷಕರಾದ ಮಂಜುಳ ಮಾತನಾಡಿ ಸ್ವಾತಂತ್ರ್ಯೋತ್ಸವದ ಬಗ್ಗೆ ಹಾಗೂ ಮಹಾಮಾರಿ ಕೊರೋನಾದಿಂದಾಗಿ ಶಾಲಾಮಕ್ಕಳಿಲ್ಲದೇ ಧ್ವಜಾರೋಹಣವನ್ನು ನೆರವೇರಿಸುವ ಪರಿಸ್ಥಿತಿ ಬರುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು, ಸಹ ಶಿಕ್ಷಕರಾದ ಶ್ರೀಯುತ ಸುರೇಶ್ ಇವರು ಸ್ವಾತಂತ್ರ್ಯೋತ್ಸವದ ಕುರಿತು ಮಾತನಾಡಿದರು ಶಿಕ್ಷಕಿಯರಾದ ಪ್ಲೋರಿನ್ ಡಿಸೋಜ ಹಾಗೂ ಸುಹಾಸಿನಿ ಇವರು ಉಪಸ್ಥಿತರಿದ್ದರು, ಮುಖ್ಯಶಿಕ್ಷಕರಾದ ಮಂಜುಳಾ ಇವರು ಸ್ವಾಗತಿಸಿ ವಂದಿಸಿದರು ನಂತರ ಆಗಮಿಸಿದವರೆಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು, ಕಾರ್ಯಕ್ರಮದ ನಂತರ ಎಲ್ಲಾ ಶಿಕ್ಷಕರು, ಮುಖ್ಯಶಿಕ್ಷಕರ ಜೊತೆ ಮಕ್ಕಳ ಮನೆ ಭೇಟಿ ಮಾಡಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.