ಸರಕಾರಿ ಪ್ರೌಢ ಶಾಲೆ ಗುರುವಾಯನಕೆರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಗುರುವಾಯನಕೆರೆ: ಆ.15ರಂದು ಸರ್ಕಾರಿ ಪ್ರೌಢಶಾಲೆ ಗುರುವಾಯನಕೆರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸರಳವಾಗಿ ಮತ್ತು ಎಲ್ಲಾ ಮುಂಜಾಗ್ರತೆಯಿಂದ ಆಚರಿಸಲಾಯಿತು. ಕುವೆಟ್ಟು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರೂ ಹಾಗೂ ಆತ್ಮೀಯ ಪೋಷಕರಾದ ಮಮತಾ ಎಂ.ಶೆಟ್ಟಿಯವರು ಧ್ವಜರೋಹಣಗೈದರು. ತನ್ನ ಶುಭ ಹಾರೈಕೆಯಲ್ಲಿ ಭಾರತದೇಶದ ಸಂಸ್ಕೃತಿ ಸಾರ್ವಭೌಮತ್ವವನ್ನು ಭದ್ರ ಪಡಿಸಲು ಸಲಹೆ ನೀಡಿದರು.


ತಾಲೂಕು ಪಂಚಾಯತ್ ಸದಸ್ಯರಾದ ಗೋಪಿನಾಥ ನಾಯಕ್, ಕುವೆಟ್ಟು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಅಶೋಕ್ ಕೋಟ್ಯಾನ್, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಗೋಪಾಲ ನಾಕ ಬನ, ಶಾಲಾಭಿವೃದ್ಧಿ ಸಮಿತಿಯ ಮಾಜಿ ಸದಸ್ಯರಾದ ಅಬ್ದುಲ್ ಲತೀಫ್, ಶಾಲಾ ಮುಖ್ಯೋಪಾಧ್ಯಾಯ ಜಗನ್ನಾಥ್ ಉಪಸ್ಥಿತರಿದ್ದರು. ಶಾಲಾ ಸಹಶಿಕ್ಷಕರಾದ ಯೋಗೀಶ್ ನಾಯಕ್ ವಂದಿಸಿದರು. ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದು ರಾಷ್ಟ್ರಗೀತೆ, ಧ್ವಜಗೀತೆ, ನಾಡಗೀತೆ ಹಾಗೂ ದೇಶ ಭಕ್ತಿಗೀತೆಗಳನ್ನು ಹಾಡಿ ಧ್ವಜ ವಂದನೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.