ಮದ್ದಡ್ಕ ನೂರುಲ್ ಹುದಾ ಜುಮುಅ ಮಸ್ಜಿದ್ ಸಭಾಂಗಣದಲ್ಲಿ 74ನೇ ಸ್ವಾತಂತ್ಯೋತ್ಸವ ಆಚರಣೆ

74ನೇ ಸ್ವಾತಂತ್ಯೋ ತ್ಸವ ದಿನಾಚರಣೆಯನ್ನು NHJM ಸಭಾಂಗಣದಲ್ಲಿ ಆಡಳಿತ ಕಮಿಟಿ ಉಪಾಧ್ಯಕ್ಷರಾದ M.H.ಅಬೂಬಕ್ಕರ್ ಇವರು ಧ್ವಜಾರೋಹಣ ಮಾಡುವುದರೊಂದಿಗೆ ಆಚರಿಸಲಾಯಿತು. ಉಪಾಧ್ಯಕ್ಷರಾದ ಹುಸನಬ್ಬ ಚಿಲಿಂಬಿ ಉಪಸ್ಥಿತರಿದ್ದರು.

ಖತೀಬರಾದ ಎಂ.ಎ.ಮುಹಮ್ಮದ್ ರಫೀಕ್ ಅಹ್ಸನಿಯವರು ದುವಾ ನೆರವೇರಿಸಿದರು. ಸದರ್ ಮುಅಲ್ಲಿಮರಾದ ಬಿ.ಹೆಚ್.ಇಸ್ಮಯಿಲ್ ಸಖಾಫಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂಮರು ವಹಿಸಿದ ಪಾತ್ರವನ್ನು ಮನ ತಟ್ಟುವಂತೆ ವಿವರಿಸಿದರು. ಸಮಾರಂಭದಲ್ಲಿ ಆಡಳಿತ ಕಮಿಟಿಯ ಪ್ರಮುಖರಾದ ಎಂ.ಉಮರಬ್ಬ, ರಾಝಿಯುದ್ದೀನ್ ಸಬರಬೈಲ್, ಸಿರಾಜ್ ಚಿಲಂಬಿ, H.M.ಹಸನಬ್ಬ, ಹಾಗೂ ಅಬ್ದುಲ್ ಕರೀಂ ನೇರಳೆಕಟ್ಟೆ, ರವೂಫ್ ಆಲಂದಿಲ, ರಿಯಾಝ್ ಮುಂಡ್ಕೂರು, ಸ್ವದಿಕ್ ದರ್ಕಾಸ್, ಮುಅಲ್ಲಿಮರಾದ ಇಬ್ರಾಹೀಂ ಮುಸ್ಲಿಯಾರ್, ಮುಹಮ್ಮದ್ ಹಾಜಿ ಸಾಗರ್ ಮುಂತಾದ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಜತೆಕಾರ್ಯದರ್ಶಿ ಸಿರಾಜ್ ಚಿಲಿಂಬಿ ಸ್ವಾಗತಿಸಿ ಕೊನೆಯಲ್ಲಿ ಕೋಶಾಧಿಕಾರಿ ಎಂ ಉಮರಬ್ಬ ಧನ್ಯವಾದ ಸಮರ್ಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.