ಬಳಂಜ ಗ್ರಾಮ ಪಂಚಾಯತಿನಲ್ಲಿ 74 ನೇ ಸ್ವಾತಂತ್ರ್ಯೋತ್ಸವ, ಸನ್ಮಾನ

ಬಳಂಜ: ಗ್ರಾಮ ಪಂಚಾಯತ್ ಬಳಂಜದಲ್ಲಿ ದೇಶದ 74ನೇ ಸ್ವಾತಂತ್ರ್ಯೋತ್ಸವ, ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು ಕೊರೊನಾ ಸಂದರ್ಭದಲ್ಲಿ ಸೈನಿಕರಂತೆ ಕೆಲಸ ಮಾಡಿದ ಬಳಂಜ, ನಾಲ್ಕೂರು, ತೆಂಕಕಾರಂದೂರು ಗ್ರಾಮದ ಆಶಾ ಕಾರ್ಯಕರ್ತೆಯರಾದ ಮಂಗಳಾ ದೇವಾಡಿಗ, ಗುಲಾಬಿ,ಸವಿತಾ,ರೇವತಿ ಅವರನ್ನು ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ವೇಣುಗೋಪಾಲ್ ಆರ್, ಪಿಡಿಓ ಸುಧಾಮಣಿ, ಕಾರ್ಯದರ್ಶಿ ಪ್ರಿಯಾ ಹೆಗ್ಡೆ, ದಿಬ್ಬಂದಿಗಳಾದ ಶಶಿಕಲಾ, ಆನಂದ ನಾಯ್ಕ, ಆನಂದ ಕೆ, ಹಮೀದ್, ಸೌಮ್ಯ,ವಾಸು,ಒಕ್ಕೂಟದ ಕಾರ್ಯದರ್ಶಿ ವಿಮಲ ಉಪಸ್ಥಿತರಿದ್ದರು. ಕೇಂದ್ರ ಸರಕಾರದ ಆದೇಶದಂತೆ ಗಂಧಗೀ ಮುಕ್ತ ಆಂದೋಲನಕ್ಕೆ ಚಾಲನೆ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.