ಬದುಕು ಕಟ್ಟೋಣ ತಂಡದಿಂದ ಕೊಳಂಬೆಯಲ್ಲಿ 74ನೇ ಸ್ವಾತಂತ್ರ್ಯೋತ್ಸವ ಆಚರಣೆ

ಚಾರ್ಮಾಡಿ: ಇಲ್ಲಿನ ಕಳೆದ ವರ್ಷ ಚಾರ್ಮಾಡಿ ಗ್ರಾಮದ ಕೊಳಂಬೆಯ ಆ.9 ರಂದು ಮಳೆಯ ನೆರೆಗೆ ಮನೆ ಹಾಗೂ ಕೃಷಿ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು ಈ ಹಿನ್ನಲೆಯಲ್ಲಿ ಅಲ್ಲಿನ ಮನೆಗಳನ್ನು ಸ್ವಚ್ಚಗೊಳಿಸಿ ಗೃಹ ಪ್ರವೇಶ ಮಾಡಲಾಗಿತ್ತು. ನಂತರ ಕೃಷಿ ಜಾಗದಲ್ಲಿ ತುಂಬಿದ್ದ ಹೂಳನ್ನು ತೆಗೆದು ಭತ್ತದ ಕೃಷಿ ನಾಟಿ ಮಾಡುವುದರೊಂದಿಗೆ ಬದುಕು ಕಟ್ಟೋಣ ತಂಡದ ವತಿಯಿಂದ ಸ್ವಾತಂತ್ರ್ಸೋತ್ಸವವನ್ನು ಆಚರಿಸಲಾಯಿತು. ಆ ನೆನಪಿಗಾಗಿ ಇಂದು ಅದೇ ಸ್ಥಳದಲ್ಲಿ ಮುನ್ನೂರಕ್ಕೂ ಅಧಿಕ ಕಾರ್ಯಕರ್ತರಿಂದ 40 ಎಕ್ರೆ ಜಾಗದಲ್ಲಿ ಭತ್ತದ ನಾಟಿ ಕೃಷಿ ಮಾಡಿ ಫಲಾನುಭವಿಗಳಿಗೆ ಹಸ್ತಾಂತರ ಕಾರ್ಯ ನಡೆಯಿತು.

ಧ್ವಜರಾಹೋಣವನ್ನು ಗುರುವಾಯನಕೆರೆ ನವಶಕ್ತಿ ಉದ್ಯಮಿ ರಾಜೇಶ್ ಶೆಟ್ಟಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಭಜರಂಗದಳದ ಜಿಲ್ಲಾ ಸಂಚಾಲಕ ಭಾಸ್ಕರ್ ಧರ್ಮಸ್ಥಳ ಉಪಸ್ಥಿತರಿದ್ದು ಶುಭ ಕೋರಿದರು.

ಈ ಸಂದರ್ಭದಲ್ಲಿ ಶರತ್ ಕೃಷ್ಣ ಪಡುವೆಟ್ನಾಯ, ಯತೀಶ್ ಪೊದುವಾಳ್, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬದುಕು ಕಟ್ಟೋಣ ತಂಡದ ಸಂಯೋಜಕರಾದ ಲಕ್ಷ್ಮೀ ಗ್ರೂಪ್ ನ ಮಾಲಕ ಮೋಹನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. , ಉಜಿರೆ ಸಂಧ್ಯಾ ಟ್ರೇಡರ್ಸ್ ನ ರಾಜೇಶ್ ಪೈ ಧನ್ಯವಾದ ವಿತ್ತರು ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಹಾಗೂ ಕೊಲಂಬೆಯ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.