ನಿವೃತ್ತ ಪೊಲೀಸ್ ವರಿಷ್ಟಾಧಿಕಾರಿ ಪೀತಾಂಬರ ಹೇರಾಜೆಯವರ ಹುಟ್ಟು ಹಬ್ಬದ ಪ್ರಯುಕ್ತ ಭೀಮಶಾಂತಿ ಹೋಮ

ಬೆಳ್ತಂಗಡಿ: ಬೆಳ್ತಂಗಡಿಯ ನಿವೃತ್ತ ಪೋಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೇರಾಜೆಯವರ 70 ನೇ ಹುಟ್ಟು ಹಬ್ಬದ ಪ್ರಯುಕ್ತ ಆ.14 ರಂದು ಲಾಯಿಲ ಶ್ರೀ ಗುರುರಾಘವೇಂದ್ರ ಮಠದಲ್ಲಿ ಭೀಮಶಾಂತಿ ಹೋಮ, ರಾಯರ ಸನ್ನಿಧಿಯಲ್ಲಿ ಮತ್ತು ಹನುಮಾನ್ ಸನ್ನಿಧಿಯ ವಿಶೇಷ ಪೂಜೆ ಕೋವಿಡ್-19 ಹಿನ್ನಲೆಯಿಂದ ಸರಳವಾಗಿ ಜರುಗಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ, ಉದ್ಯಮಿ ರಮಾನಂದ ಸಾಲಿಯಾನ್,  ಬಿಲ್ಲವ ಮಹಿಳಾ ವೇದಿಕೆ ಸ್ಥಾಪಕ ಅಧ್ಯಕ್ಷೆ ಸುಜಿತಾ ವಿ ಬಂಗೇರ, ಅಧ್ಯಕ್ಷೆ ರಾಜಶ್ರೀ ರಮಣ್, ಕಾರ್ಯದರ್ಶಿ ಶಾಂಭವಿ ಪಿ ಬಂಗೇರ, ಹೇರಾಜೆಯವರ ಪತ್ನಿ ಸಂಗೀತಾ ಪಿ ಹೇರಾಜೆ, ಸಹೋದರರಾದ ಶೇಖರ ಬಂಗೇರ, ಜಯರಾಮ ಬಂಗೇರ, ಮತ್ತು ಕುಟುಂಬಸ್ಥರು, ರಾಘವೇಂದ್ರ ಸೇವಾ ಪ್ರತಿಷ್ಟಾನದ ಟ್ರಸ್ಟಿಗಳಾದ ಜಿ.ಸೋಮೆಗೌಡ ಮಹಾಬಲ ಶೆಟ್ಟಿ, ವಸಂತ ಸುವರ್ಣ, ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರು, ನಿತ್ಯಾನಂದ ನಾವರ, ನಾರಾಯಣ ಪೂಜಾರಿ ಮಚ್ಚಿನ, ಶಾಂತಾ ಬಂಗೇರ, ಪುಷ್ಪಾವತಿ ನಿತ್ಯಾನಂದ ಮೊದಲಾದವರು ಹಾಜರಿದ್ದರು. ರಾಘವೇಂದ್ರ ಬಾಂಗಿಣ್ಣಾಯ ಮತ್ತು ಅರ್ಚಕ ವೃಂದದವರು ವೈದಿಕ ಕಾರ್ಯಕ್ರಮ ನಡೆಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.