HomePage_Banner_
HomePage_Banner_

ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ 618 ಅಂಕ ಪಡೆದ ಆಕಾಶ್ ಪ್ರಥಮ ಶ್ರೇಣಿ

ಬೆಳ್ತಂಗಡಿ: ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸತತ 10 ನೇ ಬಾರಿ 100% ಫಲಿತಾಂಶ ಪಡೆದುಕೊಂಡಿದೆ. 2019-20ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ 47 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮಚ್ಚಿನ, ಬೆಳ್ತಂಗಡಿ ತಾಲೂಕು ಸತತವಾಗಿ 10 ನೇ ಬಾರಿ 10% ಫಲಿತಾಂಶ ದಾಖಲಿಸಿದೆ. 618 ಅಂಕ ಪಡೆದ ಆಕಾಶ್ ಪ್ರಥಮ ಸ್ಥಾನಿಯಾಗಿದ್ದು, 611 ಅಂಕ ಪಡೆದ ಹಿತೇಶ್ ದ್ವಿತೀಯ ಸ್ಥಾನ, 610 ಅಂಕ ಪಡೆದ ಸ್ಪೂರ್ತಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ, 27 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.  

ಶಿವರಾಜ್ 603,  ಚೈತ್ರಾ 602,  ಕಾರ್ತಿಕ್ 601, ಯಶಾಂತ್ 596,  ಶ್ರೇಯಾ ಎ 591, ಹವ್ಯಾ 587,  ಶ್ವೇತಾ 586,  ಸಂದೀಪ್585, ತರುಣ್ 580,  ಕಾವ್ಯ 579,  ಶ್ರೇಯಾ ಕೆ ಜೆ 566, ಲೀಶಲ್ 565, ಬಸವರಾಜ್ 563 ಅಂಕ ಪಡೆದು ಉತ್ತೀರ್ಣಗೊಂಡಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.