ಸೆ.16ರಿಂದ 3೦ರೊಳಗೆ ಮಂಗಳೂರು ವಿಶ್ವ ವಿದ್ಯಾಾನಿಲಯದ ಪದವಿ ಮತ್ತು ಸ್ನಾಾತಕೋತ್ತರ ಪದವಿಯ 2019-20ನೇ ಸಾಲಿನ ಅಂತಿಮ ಸೆಮಿಸ್ಟರ್‌ಗಳ ಪರೀಕ್ಷೆ

Advt_NewsUnder_1
Advt_NewsUnder_1
Advt_NewsUnder_1

ಸರ್ಕಾರ ಮತ್ತು ಯುಜಿಸಿ ನಿರ್ದೇಶನದ ಮೇರೆಗೆ ಮಂಗಳೂರು ವಿಶ್ವ ವಿದ್ಯಾಾನಿಲಯದ ಪದವಿ ಮತ್ತು ಸ್ನಾಾತಕೋತ್ತರ ಪದವಿಯ 2019-20ನೇ ಸಾಲಿನ ಅಂತಿಮ ಸೆಮಿಸ್ಟರ್‌ಗಳ ಪರೀಕ್ಷೆೆಯನ್ನು ಸೆ.16ರಿಂದ 3೦ರೊಳಗೆ ನಡೆಸಲಾಗುವುದು ಎಂದು ಕುಲಪತಿ ಪ್ರೊೊ.ಯಡಪಡಿತ್ತಾಾಯ ತಿಳಿಸಿದ್ದಾರೆ.

ಕೋವಿಡ್-19 ಇದ್ದರೂ ಅಂತಿಮ ಸೆಮಿಸ್ಟರ್ ವಿದ್ಯಾಾರ್ಥಿಗಳ ಭವಿಷ್ಯದ ದೃಷ್ಟಿಿಯಿಂದ ಪದವಿ, ಸ್ನಾಾತಕೋತ್ತರ ಪದವಿಯ ಕೊನೆಯ ಸೆಮಿಸ್ಟರ್ ಪರೀಕ್ಷೆೆಗಳು ಮಾತ್ರ ಈ ಬಾರಿ ನಡೆಯಲಿವೆ. ಉಳಿದ ಸೆಮಿಸ್ಟರ್ ವಿದ್ಯಾಾರ್ಥಿಗಳನ್ನು ವಿವಿಧ ಮಾನದಂಡಗಳ ಆಧಾರದಲ್ಲಿ ಅಂಕ ನೀಡಿ, ಪರೀಕ್ಷೆೆ ಇಲ್ಲದೆ ಮುಂದಿನ ಸೆಮಿಸ್ಟರ್‌ಗೆ ಮುಂಬಡ್ತಿಿ ನೀಡಲಾಗುವುದು ಎಂದು ಅವರು ಸುದ್ದಿಗೋಷ್ಠಿಿಯಲ್ಲಿ ಹೇಳಿದರು.

ಅಂತಿಮ ಸೆಮಿಸ್ಟರ್‌ನ ವಿದ್ಯಾಾರ್ಥಿಗಳು ಮಾತ್ರವಲ್ಲ, ಪದವಿ ಮುಗಿಸಿ ವಿವಿಧ ಸೆಮಿಸ್ಟರ್‌ಗಳ ಪರೀಕ್ಷೆೆಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾಾರ್ಥಿಗಳಿಗೂ ಅಂತಹ ಹಿಂಬಾಕಿ ಕೋರ್ಸ್ ಅಥವಾ ಪತ್ರಿಿಕೆಗಳ ಪರೀಕ್ಷೆೆಗೆ ಹಾಜರಾಗಲು ಅವಕಾಶವಿದೆ. ಈ ಹಿಂಬಾಕಿ ಪರೀಕ್ಷೆೆಗಳೂ ಇದೇ ಅವಧಿಯಲ್ಲಿ ನಡೆಯಲಿವೆ. ಆದ್ದರಿಂದ ಇದುವರೆಗೂ ಶುಲ್ಕ ಪಾವತಿ ಮಾಡದ ಮತ್ತು ಪರೀಕ್ಷಾಾ ನೋಂದಣಿಯನ್ನೂ ಮಾಡದ ವಿದ್ಯಾಾರ್ಥಿಗಳು ಆಗಸ್‌ಟ್‌ ೧೭ರೊಳಗೆ ಸಂಬಂಧಿತ ಕಾಲೇಜು ಪ್ರಾಾಂಶುಪಾಲರಿಗೆ ಮನವಿ ಸಲ್ಲಿಸಬೇಕು ಎಂದು ಪ್ರೊೊ.ಯಡಪಡಿತ್ತಾಾಯ ತಿಳಿಸಿದರು.

ಶುಲ್ಕ ಕಟ್ಟಲಾಗದಿದ್ದರೂ ಪರೀಕ್ಷೆೆ ಅವಕಾಶ: ಪರೀಕ್ಷಾಾ ಶುಲ್ಕ ಶೇ.10ರಷ್ಟು ಏರಿಸುವ ಅವಕಾಶವಿದ್ದರೂ ಈ ಬಾರಿ ಶುಲ್ಕ ಏರಿಕೆ ಮಾಡಿಲ್ಲ. ಕೊರೋನಾ ಕಾರಣದಿಂದ ಆರ್ಥಿಕ ದುಃಸ್ಥಿಿತಿಯಿಂದ ಪರೀಕ್ಷಾಾ ಶುಲ್ಕ ಕಟ್ಟಲು ಸಾಧ್ಯವಾಗದಿದ್ದರೂ ಪರೀಕ್ಷೆೆ ಬರೆಯಲು ಅವಕಾಶವಿದೆ. ಅಂತಹ ವಿದ್ಯಾಾರ್ಥಿಗಳು ಪರೀಕ್ಷೆೆ ಮುಗಿದು ಅಂಕಪಟ್ಟಿಿ ಪಡೆಯುವಾಗ ಶುಲ್ಕ ಕಟ್ಟಿಿದರೂ ಸಾಕು. ಆದರೆ ಪರೀಕ್ಷೆೆಗೆ ಹಾಜರಾಗಬೇಕಾದರೆ ಆಯಾ ಸೆಮಿಸ್ಟರ್‌ನಲ್ಲಿ ಕನಿಷ್ಠ ಹಾಜರಾತಿ ಅಗತ್ಯ ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.