HomePage_Banner_
HomePage_Banner_

ಮಡಂತ್ಯಾರಿಗೆ ಸಹಾಯಕ ಧರ್ಮ ಗುರುಗಳಾಗಿ ಸ್ಟೀವನ್ ಕೋಟಿನ್ನ

ಮಡಂತ್ಯಾರು: ಇಲ್ಲಿಯ ಸೇಕ್ರೇಡ್ ಹಾರ್ಟ್ ಚರ್ಚ್ ಮಡಂತ್ಯಾರಿಗೆ ನೂತನ ಸಹಾಯಕ ಧರ್ಮಗುರುಗಳಾಗಿ ಸ್ಟೀವನ್ ಕುಟಿನ್ನ ಇವರು ಆ.10 ರಂದು ಆಗಮಿಸಿದ್ದಾರೆ. ಇವರು ಇತ್ತೀಚೆಗೆ ಮಂಗಳೂರಿನಲ್ಲಿ ನೂತನ ಧರ್ಮಗುರುಗಳಾಗಿ ಅಭಿಷಿಕ್ತರಾಗಿದ್ದರು. ಇವರಿಗೆ ಧರ್ಮಗುರುಗಳಾಗಿ ಸೇವೆ ಸಲ್ಲಿಸಲು ಸಹಾಯಕ ಧರ್ಮ ಗುರುಗಳಾಗಿ ಪ್ರಥಮವಾಗಿ ಮಡಂತ್ಯಾರು ಚರ್ಚ್ ಲಭಿಸಿದೆ.

ಇವರನ್ನು ಚರ್ಚ್ ನ ಪ್ರಧಾನ ಧರ್ಮ ಗುರುಗಳು ವಂ. ಫಾದರ್ ಬೇಸಿಲ್ ವಾಸ್, ಪ್ರಾಂಶುಪಾಲರಾದ ವಂ.ಫಾದರ್ ಜೆರೋಮ್ ಡಿಸೋಜ ಸ್ವಾಗತಿಸಿದರು. ಈ ಸಂದರ್ಭದ ಪಾಲನಾ ಮಂಡಳಿಯ ಉಪಾಧ್ಯಕ್ಷ ಲಿಯೋ ರೊಡ್ರಿಗಸ್, ಕಾರ್ಯದರ್ಶಿ ಜೆರಾಲ್ಡ್ ಮೋರಾಸ್, ಹಾಗೂ ಪಾಲನ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.