ಶಿರ್ಲಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಿಗೆ 1 ಲಕ್ಷ 128 ರೂ ಪ್ರೋತ್ಸಾಹ ಧನ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಶಿರ್ಲಾಲು: ಕೊರೊನಾ ಮಹಾಮಾರಿಯಿಂದ ದೇಶ ಲಾಕ್‌ಡೌನ್ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಭ ಜನರು ಭಯದ ಜೊತೆಗೆ ಹಲವಾರು ಸವಾಲುಗಳನ್ನು ಎದುರಿಸುತ್ತಿರುವಂತಾಯಿತು. ಈ ಸಂದರ್ಭದಲ್ಲಿ ಶಿರ್ಲಾಲು ಹಾಲು ಉತ್ಪಾದಕ ಸಹಕಾರಿ ಸಂಘಕ್ಕೆ ಹಾಲು ಹಾಕುವ 270 ಸದಸ್ಯರಿಗೆ ಪ್ರತಿ ಲೀಟರ್‌ಗೆ 1 ರೂಪಾಯಿ ಹೆಚ್ಚಿಸಿ 2 ತಿಂಗಳಿನ ಒಟ್ಟು ಮೌಲ್ಯ  1ಲಕ್ಷ 128 ರೂ  ಹಣವನ್ನು ವಿತರಿಸಲಾಯಿತು. ಜೊತೆಗೆ ಶಿರ್ಲಾಲು ಗ್ರಾಮದ ಅಶಕ್ತ 5 ಮನೆಗಳನ್ನು ಗುರುತಿಸಿ ಅವರಿಗೆ ಆಹಾರ ಕಿಟ್‌ನ್ನು ವಿತರಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಮಾಧವ ಶಿರ್ಲಾಲು, ಉಪಾಧ್ಯಕ್ಷ ಅಶೋಕ್ ದೇವಾಡಿಗ, ನಿರ್ದೇಶಕರಾದ ನಂದ ಕುಮಾರ್, ಸಗುಣ, ಜಯಂತಿ, ಪ್ರಕಾಶ್ ಹೆಗ್ಡೆ, ರಮೇಶ್ ಕೋಟ್ಯಾನ್, ಜೋಯ್ ಕಿಶೋರ್ ಮಂಡೊನ್ಸಾ, ರಘನಾಥ ಶೆಟ್ಟಿ, ರೂಪ, ನಾರಾಯಣ ಗೌಡ, ಶೀನಪ್ಪ ಎಂ. , ಪ್ರತಾಪ್ ಪೂಜಾರಿ, ಕಾರ್ಯದರ್ಶಿ ಶಿವರಾಮ್ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.