HomePage_Banner_
HomePage_Banner_

ಕೊರೊನಾ ಕಾಲಘಟ್ಟದಲ್ಲಿ ಪೊಲೀಸ್ ಇಲಾಖೆ ಸೇವೆಯೂ ಅಭಿನಂದನಾರ್ಹ : ಎಂ.ಎಲ್.ಸಿ ಪ್ರತಾಪಸಿಂಹ ನಾಯಕ್

ಬೆಳ್ತಂಗಡಿ : ಕಾನೂನು ಪರಿಪಾಲನೆ ಜೊತೆಗೆ ಅಪರಾಧ ತಡೆಯ ಹೊಣೆಗಾರಿಕೆಯ ನಡುವೆಯೂ ಪೊಲೀಸ್ ಇಲಾಖೆ ಕೊರೊನಾ ವಾರಿಯರ್ಸ್ ಗಳಾಗಿ ಸಲ್ಲಿಸುತ್ತಿರುವ ಸೇವೆ ಅಭಿನಂದನಾರ್ಹ. ಅವರ ಆರೋಗ್ಯ ರಕ್ಷಣೆಗಾಗಿ ರೋಟರಿ ಕ್ಲಬ್ ಹಾಗೂ ಇನ್ನಿತರ ಸಂಸ್ಥೆಗಳು ಮುಂದಾಗಿರುವುದು ಅಭಿನಂದನೀಯ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಹೇಳಿದರು.

ಆ.12 ರಂದು, ರೋಟರಿ ಕ್ಲಬ್ ಬೆಳ್ತಂಗಡಿ, ಆರ್.ಸಿ.ಸಿ ಮುಂಡಾಜೆ, ಕರ್ನಾಟಕ ಪೋಲೀಸ್ ಇಲಾಖೆ, ಕರ್ನಾಟಕ ಮಾನವ ಹಕ್ಕುಗಳ ಸಮಿತಿ (ರಿ) ಬೆಳ್ತಂಗಡಿ, ಸ್ಪಂದನಾ ಪಾಲಿಕ್ಲಿನಿಕ್ ಬೆಳ್ತಂಗಡಿ, ಯುವ ವಕೀಲರ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯುವ ದಿನದ ಪ್ರಯುಕ್ತ‌ ಹಮ್ಮಿಕೊಂಡಿದ್ದ ಪೋಲೀಸರ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡುತ್ತಿದ್ದರು.

ಕೆಲಸದ ಒತ್ತಡದಲ್ಲಿ ಆರೋಗ್ಯದ ಕಡೆಗೆ ಗಮನ ಹರಿಸುವುದು ಕಡಿಮೆಯಾಗಿದೆ. ಅದರಲ್ಲೂ ದಿನದ 24 ಗಂಟೆ ಸೇವೆ ಸಲ್ಲಿಸುವ ಪೋಲೀಸರು ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕಾಗಿದೆ ಎಂದು ಸಲಹೆ ಇತ್ತರು.

ಶಿಬಿರ ಉದ್ಘಾಟಿಸಿದ ಸರ್ಕಲ್ ಇನ್ಸ್ಫೆಕ್ಟರ್ ಸಂದೇಶ್ ಪಿ.ಜಿ, ೨೪ಗಂಟೆ ಸೇವೆ ಸಲ್ಲಿಸುವ ಪೋಲೀಸರ ಆರೋಗ್ಯದ ಕಾಳಜಿಯನ್ನು ವಿವಿದ ಸಂಸ್ಥೆಗಳು ಹೊಂದಿರುವುದು ಪೋಲೀಸರ ಕಾರ್ಯಕ್ಕೆ ಶಕ್ತಿ ಬಂದಿದೆ. ಎಲ್ಲಾ ಪೊಲೀಸ್ ಸಿಬ್ಬಂದಿಗಳು ಆರೋಗ್ಯ ತಪಾಸಣೆ ಮಾಡಿ ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು ಎಂದರು.

ಯುವ ದಿನಾಚರಣೆ ಪ್ರಯುಕ್ತ ಕ್ರೀಡಾ ಸಾಧಕ ಸನ್ಮಾನ ಕಾರ್ಯಕ್ರಮದಲ್ಲಿ ಕ್ರೀಡಾ ಸಾಧಕ ಪೋಲೀಸ್ ಸಿಬ್ಬಂದಿ ನಾಗರಾಜ್ ಅವರನ್ನು ಗೌರವಿಸಲಾಯಿತು.

ಜಿಲ್ಲಾ ಆರ್‌ಸಿಸಿ ಅಧ್ಯಕ್ಷ ಯಶವಂತ್ ಪಟವರ್ಧನ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಐ ನಂದಕುಮಾರ್, ಪ್ರೊಬೆಷನರಿ ಎಸ್‌ಐ ಕುಮಾರ್ ಕುಂಬ್ಲೆ, ತಾಲೂಕು ಮಾನ ಹಕ್ಕುಗಳ ಸಮಿತಿ ಅಧ್ಯಕ್ಷ ಸೆಬಾಸ್ಟಿಯನ್ ಪಿ.ಸಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಪ್ ಆಲಿಕುಂಞಿ, ರೋಟರಿ ಯುವ ವಿಭಾಗದ ನಿರ್ದೇಶಕಿ ರಕ್ಷಾ ರಾಗ್ನೇಶ್, ಸ್ಪಂದನ ಪಾಲಿಕ್ಲಿನಿಕ್ ಮಾಲಕ ಮೆಲ್ವಿನ್ ಉಪಸ್ಥಿತರಿದ್ದರು.

ರೋಟರಿ ಅಧ್ಯಕ್ಷ ಬಿ.ಕೆ ಧನಂಜಯ ರಾವ್ ಸ್ವಾಗತಿಸಿದರು. ಸ್ಪಂದನ ಪೊಲಿಕ್ಲಿನಿಕ್‌ನ ಉಮೇಶ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ವಕೀಲರ ವೇದಿಕೆಯ ಅಧ್ಯಕ್ಷ ಪ್ರಶಾಂತ್ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.