ಸರಕಾರಿ ಪ್ರೌಢಶಾಲೆ ಬದನಾಜೆ: ಶೇ.75 ಫಲಿತಾಂಶ

ಸರಕಾರಿ ಪ್ರೌಢಶಾಲೆ ಬದನಾಜೆಯಿಂದ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ 36 ವಿದ್ಯಾರ್ಥಿಗಳು ಹಾಜರಾಗಿದ್ದು 27 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ 75% ಫಲಿತಾಂಶ ಬಂದಿದೆ. ಈ ಬಾರಿ ಗುಣಾತ್ಮಕ ಫಲಿತಾಂಶವು ಉತ್ತಮವಾಗಿದ್ದು 66.4% ಇದೆ. ಕೊರೋನಾದ ಸಂಕಷ್ಟದಲ್ಲಿಯೂ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ತೃತೀಯ ಭಾಷೆ ತುಳುವಿನಲ್ಲಿ 7 ವಿದ್ಯಾರ್ಥಿಗಳು ಶೇಕಡಾ 100 ಅಂಕ ಗಳಿಸಿದ್ದಾರೆ. ಕುಮಾರಿ ವರ್ಷಿತಾ ಪ್ರಥಮ ಭಾಷೆ ಕನ್ನಡದಲ್ಲಿ 125 ಅಂಕ ಗಳಿಸಿದ್ದಾಳೆ. ಹರೀಶ್ ಮತ್ತು ನಳಿನಿ ದಂಪತಿಗಳ ಸುಪುತ್ರಿಯಾದ ಕುಮಾರಿ ನಿಕ್ಷಿತಾ 553 ಅಂಕಗಳನ್ನು ಗಳಿಸಿ 88.48% ದೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಒಂದು ಡಿಸ್ಟಿಂಕ್ಷನ್ 19 ಪ್ರಥಮ ದರ್ಜೆ, 6 ದ್ವಿತೀಯ ದರ್ಜೆ. ಒಂದು ಪಾಸ್ ಕ್ಲಾಸ್‌ನಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯಶಿಕ್ಷಕಿ ಮೇಧಾ, ಮತ್ತು ಉಳಿದ ಸಹಶಿಕ್ಷಕರು, ಎಸ್‌ಡಿಎಮ್‌ಸಿ ಉಪಾಧ್ಯಕ್ಷ ಗಣೇಶ್ ನಾಯ್ಕ ಮತ್ತು ಸದಸ್ಯರು, ಶಿಕ್ಷಣ ತಜ್ಞರಾದ ಬಾ.ಬಾ. ಉಜಿರೆ ಅಭಿನಂದಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.