ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ: ಶೇ.71.80 ತೇರ್ಗಡೆ| ದ.ಕ ಜಿಲ್ಲೆಗೆ 12 ನೇ ಸ್ಥಾನ

Advt_NewsUnder_1
Advt_NewsUnder_1
Advt_NewsUnder_1

ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಪ್ರಸಕ್ತ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಮೊದಲ ಸ್ಥಾನ ಗಳಿಸಿ ಎರಡನೇ ಸ್ಥಾನ ಬೆಂಗಳೂರು ಗ್ರಾಮಾಂತರ, ಮೂರನೇ ಸ್ಥಾನ ಮಧುಗಿರಿ, ನಾಲ್ಕನೇ ಸ್ಥಾನ ಮಂಡ್ಯ, ಐದನೇ ಸ್ಥಾನ ಚಿತ್ರದುರ್ಗ ಜಿಲ್ಲೆಯ ಪಾಲಾಗಿದೆ. ಯಾದಗಿರಿ ಜಿಲ್ಲೆಯ ಕೊನೆಯ ಸ್ಥಾನ ಪಡೆದಿದೆ.
ಶೇ.71.81 ಫಲಿತಾಂಶ ಬಂದಿದ್ದು – ಸುಳ್ಯದ ಅನುಶ್ ಸೇರಿ ಆರು ಮಂದಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ ಈ ಬಾರಿ 8,11,150 ವಿದ್ಯಾರ್ಥಿಗಳಲ್ಲಿ 5,82,316 ಉತ್ತೀರ್ಣ ಆಗಿದ್ದು,  2,28,734 ವಿದ್ಯಾರ್ಥಿಗಳು ಅನುತ್ತೀರ್ಣ ಹೊಂದಿದ್ದಾರೆ. ಒಟ್ಟು 71.80 ಶೇಕಡಾವಾರು ಫಲಿತಾಂಶ ದಾಖಲಾಗಿದ್ದು, ಕಳೆದ ಬಾರಿ 73.70 ಫಲಿತಾಂಶ ದಾಖಲಾಗಿತ್ತು. ಈ ಬಾರಿ ಕಾರಣಾಂತರಗಳಿಂದ  19,086 ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ಬಾಕಿ ಉಳಿದಿದ್ದು,  18,067 ವಿದ್ಯಾರ್ಥಿಗಳು ಮುಂದಿನ ಬಾರಿ ಪರೀಕ್ಷೆ ಬರೆಯಲಿದ್ದಾರೆ. ಈ ಬಾರಿ ಉಡುಪಿ ಜಿಲ್ಲೆ 7 ಸ್ಥಾನ ಹಾಗೂ ದಕ್ಷಿಣ ಕನ್ನಡ 12 ನೇ ಸ್ಥಾನವನ್ನು ಪಡೆದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.