ನ್ಯಾಯತರ್ಫು:ಕಾಳು ಮೆಣಸು ಕೃಷಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ತರಬೇತಿ

Advt_NewsUnder_1
Advt_NewsUnder_1
Advt_NewsUnder_1

ನ್ಯಾಯತರ್ಫು : ಇಲ್ಲಿಯ ಕಜೆ ಪ್ರಗತಿಪರ ಕೃಷಿಕ ತಿಮ್ಮಪ್ಪ ಗೌಡ ರವರ ಮನೆಯಂಗಳದಲ್ಲಿ ಆ.10 ರಂದು ಜರುಗಿತು.
ಕರ್ನಾಟಕ ಪಶು ವೈದ್ಯಕೀಯ,ಪಶು ಹಾಗೂ ಮೀನುಗಾರಿಕೆ ವಿಜ್ಞಾನ ವಿದ್ಯಾಲಯ,ಭಾ.ಕೃ.ಆ.ಪ.ಕೃಷಿ ವಿಜ್ಞಾನ ಕೇಂದ್ರ ದಕ್ಷಿಣ ಕನ್ನಡ ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ನಡೆಯಿತು.ಮಂಗಳೂರು ಕೃಷಿ ವಿಜ್ಞಾನ ಕೇಂದ್ರ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಕೇದರ್ ನಾಥ್ ಸಸ್ಯ ಸಂರಕ್ಷಣೆ ಬಗ್ಗೆ, ಮಂಗಳೂರು ಮಣ್ಣು ಪರೀಕ್ಷಾ ತಜ್ಞರ ಡಾ.ಮಲ್ಲಿಕಾರ್ಜುನ ಎಲ್. ಮಣ್ಣು ಪರೀಕ್ಷಾ ವಿಧಾನಗಳ ಬಗ್ಗೆ ಮತ್ತು ಮಂಗಳೂರು ತೋಟಗಾರಿಕೆ ಕೃಷಿ ವಿಜ್ಞಾನಿ ಡಾ.ರಶ್ಮಿ ಆರ್. ಇವರು ತೋಟಗಾರಿಕೆಯಲ್ಲಿ ಗುಣಮಟ್ಟದ ಕೃಷಿ ನಿರ್ವಹಣೆಯ ಬಗ್ಗೆ ಕೃಷಿಕರಿಗೆ ಅನುಕೂಲವಾಗುವಂತೆ ಮಾಹಿತಿಗಳನ್ನು ನೀಡಿದರು.

ಕೃಷಿಕರ ಕೆಲವೊಂದು ಪ್ರಶ್ನೆಗೆ ತಜ್ಞರು ಸಲಹೆಗಳನ್ನು ನೀಡಿದರು.ಕೃಷಿಯಲ್ಲಿ ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸಲು ತಜ್ಞರಿಂದ ಮಾಹಿತಿಯನ್ನು ಕೇಳಿ ತಿಳಿದು ಕೊಂಡರು. ಪ್ರಗತಿಪರ ಕೃಷಿ ಕರಾದ ತಿಮ್ಮಪ್ಪ ಗೌಡ ಕಜೆ,ಸದಾಶಿವ ನಾಯ್ಕ್ ಹೀರ್ಯ, ಡೀಕಯ್ಯ ಪೂಜಾರಿ, ಸೋಮಪ್ಪ ಗೌಡ, ಗಿರಿಯಪ್ಪ ಗೌಡ, ಜಗನಾಥ ಪೂಜಾರಿ, ದಿನೇಶ್ ಶೆಟ್ಟಿ,ಅಶೋಕ ಗೌಡ, ಸುದರ್ಶನ್ ಕೆ ಮತ್ತು ಹರೀಶ್ ಗೌಡ ಮತ್ತು ಇಲಾಖೆ ವಾಹನ ಚಾಲಕ ಕೇಶವ ವಗ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಾಗೂ ಕಾಳು ಮೆಣಸು ಮತ್ತು ವಿವಿಧ ಕೃಷಿಗಳಿಗೆ ಉಪಯೋಗಿಸುವ ರಸಗೊಬ್ಬರಗಳ ಚೀಲಗಳನ್ನು ಉಚಿತವಾಗಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.