ಸಂಜೀವಿನಿ ಬೆಳ್ತಂಗಡಿ ತಂಡದಿಂದ ಮಾನವೀಯ ಸ್ಪಂದನೆ

❇️ವಿದ್ಯುತ್ ತಂತಿ ತಗಲಿ ಕಾಲು ಹಾಗೂ ಕೈ ಕಳೆದುಕೊಂಡಿರುವ ಗಣೇಶ್ ತೋಟತ್ತಾಡಿ ಅವರಿಗೆ ವೀಲ್ ಚೇರ್ ಹಸ್ತಾಂತರ

ಬೆಳ್ತಂಗಡಿ: ಕಳೆದ ಕೆಲ ವರುಷದ ಹಿಂದೆ ಬೆಳ್ತಂಗಡಿಯಲ್ಲಿ ರಚನೆಯಾದ ಸಂಜೀವಿ ಬೆಳ್ತಂಗಡಿ ತಂಡ ಸಮಾಜಮುಖಿ ಹಾಗೂ ಮಾನವೀಯ ಸ್ಪಂದನೆಯ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ.


ತಾಲೂಕಿನ ತೋಟತ್ತಾಡಿ ಗ್ರಾಮದ ಪಂಚಮಿಯಾರು ನಿವಾಸಿ ಗಣೇಶ್ ಕೂಲಿ ಕಾರ್ಮಿಕರಾಗಿದ್ದು ಇತ್ತೀಚಿಗೆ ತೋಟದಲ್ಲಿ ಕೆಲಸ ಮಾಡುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರ ಗಾಯಗೊಂಡು ಬಲಗೈ ಹಾಗೂ ಬಲಗಾಲನ್ನೂ ಕಳೆದುಕೊಂಡಿದ್ದರು,
ತೀರಾ ಬಡತನದಲ್ಲಿದ್ದು ಪತ್ನಿ ಬೀಡಿ ಕಟ್ಟಿ ತಮ್ಮ 11 ತಿಂಗಳ ಪುಟ್ಟ ಕಂದಮ್ಮನ ಜೊತೆ ಇವರು ಜೀವನ ಸಾಗಿಸುತ್ತಿದ್ದಾರೆ.
ಇವರ ಚಿಕಿತ್ಸಾ ವೆಚ್ಚ ಸುಮಾರು 7 ರಿಂದ 8 ಲಕ್ಷದವರೆಗೆ ಆಗಿದ್ದು ಇಗಾಗಲೇ ಹಲವು ಸಂಘ ಸಂಸ್ಥೆಗಳು ಸಹಾಯದ ಹಸ್ತವನ್ನು ಚಾಚಿದೆ.
ಸಂಜೀವಿನಿ ಬೆಳ್ತಂಗಡಿ ಸಂಸ್ಥೆಯ ವತಿಯಿಂದ ಗಣೇಶ್ ಅವರಿಗೆ ವೀಲ್ ಚೇರ್ ವ್ಯವಸ್ಥೆಯನ್ನು ಮಾಡಲು ನಿರ್ಧರಿಸಿದ್ದು ಅಂತೆಯೇ ತಂಡದ ತುರ್ತು ಸ್ಪಂದನ ಯೋಜನೆಯಡಿಯಲ್ಲಿ ಸಂಸ್ಥೆಯ ಸಂಜೀವಿನಿಗಳ ಸಮ್ಮುಖದಲ್ಲಿ ಗಣೇಶ್ ಅವರಿಗೆ ವ್ಹೀಲ್ ಚೇರ್ ನ್ನು ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಹರೀಶ್ ಪಡಂಗಡಿ,ರೋಶನ್ ಬೆಳಾಲ್, ಚರಣ್ ಗೌಡ ಬೈಪಾಡಿ,ಪ್ರಜ್ವಲ್‌ ಕೆ.ವಿ ಗೌಡ,ಪ್ರಶಾಂತ್ ಉಜಿರೆ,ಕಾರ್ತಿಕ್ ದಿಡುಪೆ ಲೋಕ್ಷತ್ ಬೈಪಾಡಿ ಹಾಗೂ ವಿಗ್ನೇಶ್ ದಿಡುಪೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.