ಸರ್ವ ಧರ್ಮ ಪ್ರಾರ್ಥನೆ ಎಂಬುದೇ ಸಹಿಷ್ಣುತೆಯ ಭಾಗ; ರಿಯಾಝ್ ಪರಂಗಿಪೇಟೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಒಂದು ಸಾರ್ವಜನಿಕ ಸಂಸ್ಥೆಯಲ್ಲಿ ಸರ್ವ ಧರ್ಮಗಳ ಪ್ರಾರ್ಥನೆಯನ್ನು 25 ವರ್ಷಗಳಿಂದ ಹಮ್ಮಿಕೊಂಡು ಬರುತ್ತಿರುವುದೇ ಪರಧರ್ಮ ಸಹಿಷ್ಣುತೆಯ ಭಾಗವಾಗಿದೆ ಎಂದು ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ ಹೇಳಿದರು.

ಸೋಜಾ ಇಲೆಕ್ಟ್ರಾನಿಕ್ ಬೆಳ್ತಂಗಡಿ ಇದರ ಬೆಳ್ಳಿಹಬ್ಬ ವರ್ಷಾಚರಣೆಯ ಅಂಗವಾಗಿ ಆ.9 ರಂದು ನಡೆದ ಕಾರ್ಯಕ್ರಮ ದಲ್ಲಿ ಅವರು ಉಪನ್ಯಾಸ ನೀಡುತ್ತಿದ್ದರು.

ವೇದಿಕೆಯಲ್ಲಿ ಸಂಸ್ಥೆಯ ಹಿತೈಷಿ ಅನಾಸ್, ಮ್ಯಾನೆಜರ್ ಲ್ಯಾನ್ಸಿ ಡಿ ಸೋಜಾ ಉಪಸ್ಥಿತರಿದ್ದರು.

ಸೋಜಾ ಸಂಸ್ಥೆಯ ಆಡಳಿತ ಪಾಲುದಾರ ಆಲ್ಫೋನ್ಸ್ ಫ್ರಾಂಕೋ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸರ್ಕಾರದಿಂದ ಅಂಗೀಕೃತ ರಾಷ್ಟ್ರದ್ವಜವನ್ನು ಸ್ಮರಣಿಕೆಯಾಗಿ ನೀಡಲಾಯಿತು.
ಸಂಸ್ಥೆಯ ಕಸ್ಟಮರ್ ಕೇರ್ ಆಫಿಸರ್ ಸ್ವಾತಿ .ಟಿ. ಸ್ವಾಗತಿಸಿದರು. ಪಿ.ಆರ್.ಒ ದೀಪ್ತಿ ಬಂಗೇರ ಧನ್ಯವಾದವಿತ್ತರು. ಸೇಲ್ಸ್ ಎಕ್ಸಿಕ್ಯೂಟಿವ್ ರಮೇಶ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.