ಹೋಲಿ ರೆಡೀಮರ್ ಚರ್ಚ್‌ನ ನೂತನ ಧರ್ಮ ಗುರುಗಳಾಗಿ ಫಾ| ಜೋಸೆಫ್ ಆಲ್ಫೋನ್ಸ್ ಕರ್ಡೋಜಾ ರವರು ನೇಮಕ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಆ.8 ರಂದು ಹೋಲಿ ರೆಡೀಮರ್ ಚರ್ಚ್ ಬೆಳ್ತಂಗಡಿಗೆ ನೂತನ ಧರ್ಮ ಗುರುಗಳಾಗಿ ಸೈಂಟ್ ಜೋಸೆಫ್ಸ್ ಇಂಜಿನಿಯರಿಂಗ್ ಕಾಲೇಜಿನಿಂದ ವರ್ಗಾವಣೆಗೊಂಡು ಫಾ| ಜೋಸೆಫ್ ಆಲ್ಫೋನ್ಸ್ ಕರ್ಡೋಜಾ ರವರು ಅಧಿಕಾರವನ್ನು ಸ್ವೀಕರಿಸಿದರು. ಅಧಿಕಾರ ಸ್ವೀಕಾರದ ವಿಧಿಯನ್ನು ಮಂಗಳೂರಿನ ಬಿಷಪರ ಪ್ರತಿನಿಧಿಯಾಗಿ ಫಾ| ಬೇಸಿಲ್ ವಾಸ್ ಧರ್ಮ ಗುರುಗಳು, ಮಡಂತ್ಯಾರು ಇವರು ನೆರವೇರಿಸಿದರು. ಮಂಗಳೂರಿನ ಮಿಲಾಗ್ರಿಸ್ ಚರ್ಚಿಗೆ ಬೆಳ್ತಂಗಡಿಯಿಂದ ವರ್ಗಾವಣೆಗೊಂಡ ಫಾ| ಬೊನವೆಂಚರ್ ನಜೆರೆತ್ ಇವರು ಅಧಿಕಾರವನ್ನು ಹಸ್ತಾಂತರಿಸಿದರು. ನಂತರ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಹೊಸದಾಗಿ ನಿಯುಕ್ತಿಗೊಂಡ ಧರ್ಮ ಗುರುಗಳಿಗೆ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಎಲೋಸಿಯಸ್ ಎಸ್. ಲೋಬೊ ಇವರು ಹೂ ಗುಚ್ಚ ನೀಡಿ ಬೆಳ್ತಂಗಡಿ ದೇವಾಲಯಕ್ಕೆ ಸ್ವಾಗತಿಸಿ, ಚರ್ಚಿನ ಪರಿಚಯವನ್ನು ನೀಡಿದರು.

ವೇದಿಕೆಯಲ್ಲಿ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಮಂಗಳೂರಿನ ನಿರ್ದೇಶಕರು ಉಪಸ್ಥಿತರಿದ್ದರು ಹಾಗು ಬೆಳ್ತಂಗಡಿ ವಾರಡೊ ಧರ್ಮ ಗುರುಗಳು, ಧರ್ಮ ಭಗಿನಿಯರು ಪಾಲನಾ ಪರಿಷತ್‌ನ ಸದಸ್ಯರು, ಹಾಗು ಭಕ್ತಾದಿಗಳು ಹಾಜರಿದ್ದರು. ಹೋಲಿ ರಿಡೀಮರ್ ಶಾಲೆಯ ಪ್ರಾಂಶುಪಾಲರಾದ ಜೆಸನ್ ವಿ ಮೋನಿಸ್ ಇವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.