ಇಂದಬೆಟ್ಟು: ಮನ್ನಡ್ಕ ಪ್ರದೇಶದಲ್ಲಿ ಅಡಿಕೆ ತೋಟಕ್ಕೆ ನುಗ್ಗಿದ ನೀರು

Advt_NewsUnder_1
Advt_NewsUnder_1
Advt_NewsUnder_1

ಇಂದಬೆಟ್ಟು: ಇಂದಬೆಟ್ಟು ಗ್ರಾಮ ಪಂಚಾಯತು ವ್ಯಾಪ್ತಿಯ ಮನ್ನಡ್ಕ ಬಾಲಕೃಷ್ಣ ಗೌಡ ಮತ್ತು ಶ್ರೀಮತಿ ಸವಿತಾ ದಂಪತಿಯವರ ಅಡಿಕೆ ತೋಟ ಹಾಗೂ ಇತರ ಕೃಷಿ ಭೂಮಿಗೆ ಸತತ 7 ದಿನಗಳಿಂದ ಧಾರಾಕಾರ ಗಾಳಿ ಮಳೆಯಿಂದಾಗಿ ನೇತ್ರಾವತಿ ನದಿಯ ಪ್ರವಾಹವು ಇವರ ತೋಟಕ್ಕೆ ನುಗ್ಗಿ ಅಪಾರ ಕೃಷಿಗೆ ಹಾನಿಯಾದ ವರದಿಯಾಗಿದೆ. 2019 ಆ.9ರ ಪ್ರವಾಹವು ಇವರಿಗೆ ಭಾರೀ ನಷ್ಟ ಉಂಟುಮಾಡಿತು. ಇದೀಗ ಅಡಿಕೆ ಹಣ್ಣಾಗುವ ಸಮಯವಾದ್ದರಿಂದ ಹಣ್ಣು ಅಡಿಕೆ ಪ್ರವಾಹಕ್ಕೆ ಕೊಚ್ಚಿಹೋಗಿದೆ. ದಂಪತಿಗಳು ಅಡಿಕೆ ತೋಟದಲ್ಲಿ ಪ್ರವಾಹದ ನೀರಿನ ಮಧ್ಯೆ ತೋಟದಲ್ಲಿ ತೇಲುತ್ತಿರುವ ಅಡಿಕೆ ಹೆಕ್ಕುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಮುಂದೆ ಅಡಿಕೆ ಕೃಷಿಗೆ ಕೊಳೆ ರೋಗ ಬರಬಹುದು ಎಂಬ ಭೀತಿಯಲ್ಲಿದ್ದಾರೆ ಅಡಿಕೆ ಕೃಷಿಕರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.