❇️ಪೋಲಿಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ
ಬೆಳ್ತಂಗಡಿ : ತಾಲೂಕಿನಲ್ಲಿ ಬರುತ್ತಿರುವ ಮಹಾಮಳೆಗೆ ನದಿಗಳಲ್ಲಿ ಭೀಕರವಾಗಿ ತುಂಬಿಹರಿಯುತ್ತಿರುವ ನೀರಿನಿಂದ ಜನ ಭಯಭೀತರಾಗಿದ್ದು ಈ ನಡುವೆ ಕೆಲವು ನದಿಗಳಲ್ಲಿ ಮರಗಳು, ಮರದ ತುಂಡುಗಳು ಬಂದು ಭೀಕರತೆ ಸೃಷ್ಟಿಸುತ್ತಿದೆ.
ಈ ಮಳೆಯ ನಡುವೆ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್.ಪಿ.ಜಿ ನೇತ್ರತ್ವದ ಬೆಳ್ತಂಗಡಿ ಪೊಲೀಸ್ ಠಾಣೆಯ ಪಿಎಸ್ಐ ನಂದಕುಮಾರ್.ಎಮ್.ಎಮ್ ಇವರ ತುರ್ತು ಸ್ವಂದನ ತಂಡದ ಸಿಬ್ಬಂದಿಗಳಾದ ಪ್ರೋಬೇಷನರಿ ಪಿಎಸ್ಐ ಶರತ್ ಎಮ್.ಎಲ್, ಎಎಸ್ಐ ರಾಮಯ್ಯ ಹೆಗ್ಡೆ, ಪೋಲಿಸ್ ಮಂಜುನಾಥ್, ಹೆಡ್ ಕಾನ್ಟೇಬಲ್ ವೃಷಭ ಜೈನ್ ,ಕಾನ್ಟೇಬಲ್ಗಳಾದ ಕಿರಣ್ ಕುಮಾರ್, ಮಾಲ್ತೇಶ್ , ವೆಂಕಟೇಶ್,ಶಶಿಕುಮಾರ್,ಚರಣ್ ರಾಜ್, ಗುತ್ಯಾಪ್ಪ, ನಾಗರಾಜ್ ಇವರುಗಳು ತಮ್ಮ ಪ್ರಾಣದ ಹಂಗು ತೊರೆದು ದಿಡುಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಸರದಲ್ಲಿ ತಂಡ ಮೊಕ್ಕಂ ಹೋಡಿದ್ದು ನದಿ ,ಹಳ್ಳಕ್ಕೆ ಇಳಿದು ನೀರಿನಿಂದ ತೆರವು ಕಾರ್ಯಾಚಣೆಯಲ್ಲಿ ತೋಡಗಿಕೊಂಡಿದ್ದಾರೆ.
ಬೆಳ್ತಂಗಡಿ ಪೋಲಿಸ್ ಇಲಾಖೆಯ ಕಾರ್ಯವೈಖರಿಯನ್ನು ನೋಡಿ ತುಂಬಾ ಸಂತೋಷವಾಯಿತು.. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಮಿತ್ರರಿಗೂ ಅಭಿನಂದನೆಗಳು