ಈ ಬಾರಿಯ ಗಣೇಶೋತ್ಸವ ಗಣಹೋಮ, ಧಾರ್ಮಿಕ ಕಾರ್ಯದೊಂದಿಗೆ ಆಚರಣೆ- ಕೆ.ಹರೀಶ್ ಕುಮಾರ್

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ಈ ವರ್ಷ 10ನೇ ವರ್ಷದ ಆಚರಣೆ ಆಗಿದ್ದರೂ ಕೊರೊನಾದಿಂದಾಗಿ 12 ಕಾಯಿ ತೆಂಗಿನಕಾಯಿ ಗಣಹೋಮ, ಮೂರ್ತಿ ಪ್ರತಿಷ್ಠಾನ ಮಾಡದೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮತ್ತು ಸಂಕಷ್ಟದಲ್ಲಿರುವವರಿಗೆ ಕಿಟ್ ವಿತರಣೆಯ ಮೂಲಕ ಆಚರಿಸಲಾಗವುದು ಎಂದು ಬೆಳ್ತಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಧಾನ ಪರಿಷತ್ ಸದಸ್ಯ ಕೆ ಹರೀಶ್ ಕುಮಾರ್ ತಿಳಿಸಿದರು.

ಅವರು ಆ.8 ರಂದು ಬೆಳ್ತಂಗಡಿ ಸಂತೆಕಟ್ಟೆಯ ಪ್ರಿಯದರ್ಶಿನಿ ಸೌಹಾರ್ದ ಸಹಕಾರ ಸಂಘದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ವಿವರಿಸಿದರು.

ಕೋವಿಡ್-19 ನಿಂದಾಗಿ ದೇಶದ ಜನತೆ ತುಂಬಾ ಸಂಕಷ್ಟದಲ್ಲಿದ್ದಾರೆ. ಸರಕಾರದ ನಿರ್ಬಂಧದ ಪ್ರಕಾರ ಹೆಚ್ಚು ಜನ ಸೇರದೆ ಶರತ್ತುಗಳಿಗೆ ಅನುಗುಣವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಈ ಭಾರಿ ಕೇವಲ 1 ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ‌. ಈ ಸಂದರ್ಭದಲ್ಲಿ 10 ನೇ ವರ್ಷದ ಗಣೇಶೋತ್ಸವ ಆಗುತ್ತಿರುವುದರಿಂದ 12 ತೆಂಗಿನಕಾಯಿ ಗಣಹೋಮ, ಗೌರಿ ಪೂಜೆ ಮಾಡಲಾಗುವುದು. ಹಾಗೂ ಲೈಟಿಂಗ್, ಧ್ವನಿವರ್ಧಕ ಕೆಲಸ ಮಾಡುವ ಸುಮಾರು 180 ಜನರಿಗೆ ಕಿಟ್ ವಿತರಣೆ, ಅಂಗವಿಕಲರು, ವಿಧವೆಯರು ಸೇರಿದಂತೆ ತೀರಾ ಸಂಕಷ್ಟದಲ್ಲಿರುವ 5 ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ವಿತರಣೆ, ಕೊಯ್ಯೂರಿನ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ವಿತರಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಕೇಶವ ಗೌಡ ಪಿ, ಸಲಹೆಗಾರರಾದ ಎ ಕೃಷ್ಣಪ್ಪ ಪೂಜಾರಿ, ಪದಾಧಿಕಾರಿಗಳಾದ ಮೋಹನ್ ಶೆಟ್ಡಿಗಾರ್, ರಾಮಚಂದ್ರ ಗೌಡ, ರಮೇಶ್ ಪೂಜಾರಿ ವಿ ಹಾಜರಿದ್ದರು .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.