ತುರ್ತು ಕಾರ್ಯಕ್ಕೆ ಸ್ಪಂದಿಸಿದ ನಡ ಗ್ರಾ.ಪಂ ಹಾಗೂ ವಿಪತ್ತು ನಿವ೯ಹಣಾ ತಂಡ

Advt_NewsUnder_1
Advt_NewsUnder_1
Advt_NewsUnder_1

ನಡ ಗ್ರಾಮದ ಪಂಚಾಯತ್ ವ್ಯಾಪ್ತಿಯ ನಡ ಪ್ರೌಢ ಶಾಲೆಯ ಮಾಡಿನ ಸುಮಾರು 125 ಕ್ಕೂ ಹೆಚ್ಚಿನ ಹಂಚುಗಳು ನಿನ್ನೆ ರಾತ್ರಿ ವಿಪರೀತ ಮಳೆಯಿಂದಾಗಿ ಒಡೆದು ಹೋಗಿದ್ದು ಬೆಳಗ್ಗೆ ಶಾಲೆಯ ಕೊಠಡಿಯಲ್ಲಿ ನೀರು ತುಂಬಿ ಹರಿಯುತ್ತಿದ್ದುದನ್ನು ಗಮನಿಸಿದ ಶಾಲೆಯ ಮುಖ್ಯ ಶಿಕ್ಷಕಿ ಶಮಿ೯ಳಾ ಇವರು ಕೂಡಲೇ ನಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ಹಾಗೂ 2 ನೇ ವಾರ್ಡಿನ ಸದಸ್ಯರಾದ  ವಿಜಯ ಗೌಡರನ್ನು ಸಂಪರ್ಕಿಸಿದಾಗ ಅವರು ಪಂಚಾಯತ್ ನಲ್ಲಿ ಹಂಚು ಲಭ್ಯವಿದ್ದು ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಿ ಕೂಡಲೆ ಹಂಚು ಒದಗಿಸಿಕೊಟ್ಟರು. ಸದಸ್ಯರಾದ  ವಿಜಯ ಗೌಡ ಅವರು ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಮತ್ತು ಸಂಯೋಜಕರಿಗೆ ಮಾಹಿತಿ ನೀಡಿದರು.

 

ಸ್ವಯಂಸೇವಕರಾದ ಉಮೇಶ್ ಗೌಡ, ಕಾತಿ೯ಕ್, ಮಂಜುನಾಥ್, ಜಯರಾಮ(ಅಪ್ಪು) ಒಲಿವಿನ್ ಡಿಸೋಜ, ಇವರುಗಳು ಹಾಗೂ ನಡ ಗ್ರಾಮಪಂಚಾಯ್ತಿ 2 ನೇ ವಾಡಿ೯ನ ಪಂಚಾಯ್ತಿ ಸದಸ್ಯರಾದ ವಿಜಯ ಗೌಡ, ಮುಖ್ಯ ಶಿಕ್ಷಕಿ ಶರ್ಮಿಳಾ ನಿವೃತ್ತ ಅಧ್ಯಾಪಕರಾದ ಏಕನಾಥ ಗೌಡ ಶಾಲೆಯ ಶಿಕ್ಷಕರಾದ ಮೋಹನ್ ಇವರ ಉಪಸ್ಥಿತಿಯಲ್ಲಿ ಶ್ರಮದಾನ ನಡೆಯಿತು. ವಿಪತ್ತು ನಿವ೯ಹಣೆ ತಂಡದ ಸಂಯೋಜಕಿಯಾದ ವಸಂತಿ ಇವರು ಸ್ವಯಂ ಸೇವಕರರಿಗೆ ಪ್ರೇರಣೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.