ಸಹಾಯಕ ಕಮಿಷನರ್ ಮಿತ್ತಬಾಗಿಲು ಪರಿಸರಕ್ಕೆ ಭೇಟಿ ‘ಮಳೆಹಾನಿ ಬಗ್ಗೆ ಸೂಕ್ತ ವ್ಯವಸ್ಥೆ’

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಮಿತ್ತಬಾಗಿಲು ಗ್ರಾಮದ ಗಣೇಶ ನಗರ ಪ್ರದೇಶದಲ್ಲಿ ಮಳೆಯಿಂದಾಗಿ ತೊಂದರೆಯಾಗುವ ನಿಟ್ಟಿನಲ್ಲಿ 32 ಕುಟುಂಬಗಳು ಕಡ್ಡಾಯವಾಗಿ ಸ್ಥಳಾಂತರಗೊಂಡು ಪರ್ಯಾಯ ಕೇಂದ್ರ ವ್ಯವಸ್ಥೆ ಮಾಡಲಾಗಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಇರಬೇಕು ಅಸಾಧ್ಯವಾದಲ್ಲಿ ಅವರ ಸಂಬAಧಿಕರ ಮನೆಗೆ ಹೋಗಬಹುದು ಎಂದು ಸಹಾಯಕ ಕಮಿಷನರ್ ಯತೀಶ್ ಉಳ್ಳಾಲ್ ಸ್ಥಳಕ್ಕೆ ಬೇಟಿ ನೀಡಿದ ಬಳಿಕ ಮಿನಿ ವಿಧಾನ ಸೌಧದಲ್ಲಿ ತಿಳಿಸಿದರು. ಈ ಬಗ್ಗೆ ವ್ಯವಸ್ಥೆಗಾಗಿ ಸ್ಥಳಿಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಕರಣಿಕರು, ಪೊಲೀಸರಿಗೆ ಸೂಚನೆ ನೀಡಲಾಗಿದೆ. ಎಂದರು. ಇವರು ಚಾರ್ಮಾಡಿ ತಿರುವು, ಪರ್ಲಣಿ ಪ್ರದೇಶಗಳಿಗೆ ಬೇಟಿ ನೀಡಿ ತನಿಖೆ ನಡೆಸಿದರು. ಇವರೊಂದಿಗೆ ತಹಶಿಲ್ದಾರ್ ಮಹೇಶ್ ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.