ಹೋಲಿ ರಿಡೀಮರ್ ಚರ್ಚ್‌ನ ಧರ್ಮ ಗುರುಗಳಾದ ಫಾ| ಬೊನವೆಂಚರ್ ನಜ್ರೆತ್ ರವರಿಗೆ ವಿದಾಯ ಸಮಾರಂಭ:

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ:ಆ.6 ರಂದು ಹೋಲಿ ರಿಡೀಮರ್ ಚರ್ಚ್ ಬೆಳ್ತಂಗಡಿಯಲ್ಲಿ ದಿವ್ಯ ಬಲಿಪೂಜೆ ನಡೆಯಿತು. ಬಲಿ ಪೂಜೆಯಲ್ಲಿ ಪ್ರಧಾನ ಧರ್ಮ ಗುರುಗಳಾಗಿ ಫಾ| ಬೊನವೆಂಚರ್ ನಜ್ರೆತ್, ಫಾ| ಜೆಸನ್ ವಿ ಮೋನಿಸ್, ಫಾ| ಅನಿಲ್ ಪ್ರಕಾಶ್ ಡಿಸಿಲ್ವಾ, ಫಾ| ಮೆಲ್ವಿನ್ ಡಿಸೋಜ ಮತ್ತು ಫಾ| ಪ್ರವೀನ್ ಡಿಸೋಜ ಭಾಗವಹಿಸಿದ್ದರು.


ಬಲಿ ಪೂಜೆಯ ನಂತರ ಹೋಲಿ ರಿಡಿಮರ್ ಚರ್ಚ್ ನ ಪ್ರಧಾನ ಧರ್ಮ ಗುರುಗಳಾದ ಫಾ| ಬೊನವೆಂಚರ್ ನಜ್ರೆತ್ ಇವರಿಗೆ ಮಂಗಳೂರಿನ ಮಿಲಾಗ್ರಿಸ್ ಚರ್ಚ್‌ನ ಪ್ರಧಾನ ಧರ್ಮ ಗುರುಗಳಾಗಿ ವರ್ಗಾವಣೆಗೊಂಡಿದ್ದರಿಂದ ಚರ್ಚ್ ವತಿಯಿಂದ ಆತ್ಮೀಯ ವಿದಾಯ ಸಮಾರಂಭ ಏರ್ಪಡಿಸಲಾಯಿತು.

ವಿದಾಯ ಸಮಾರಂಭದಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಜೆಸನ್ ವಿ. ಮೋನಿಸ್ ರವರು ತಮ್ಮ ಒಡನಾಟದ ಬಗ್ಗೆ ಮಾತನಾಡಿ ಶುಭ ಹಾರೈಸಿದರು ಮತ್ತು ವರ್ಗಾವಣೆಗೊಂಡ ಪ್ರಧಾನ ಧರ್ಮ ಗುರುಗಳಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಎಲೋಸಿಯಸ್ ಎಸ್. ಲೋಬೊ ಹೂ ಗುಚ್ಚವನ್ನು ನೀಡಿ ಸನ್ಮಾನ ಪತ್ರವನ್ನು ವಾಚಿಸಿ ಹಸ್ತಾಂತರಿಸಿದರು. ಕಾರ್ಯದರ್ಶಿಯಾದ ಪೌಲಿನ್ ರೇಗೊ ಇವರು ಸ್ಮರಣಿಕೆ ನೀಡಿದರು. ಸನ್ಮಾನ ಸ್ವೀಕರಿದ ಧರ್ಮ ಗುರುಗಳು ಕಳೆದ ಆರು ವರ್ಷ ಎರಡು ತಿಂಗಳು ತಾವು ನೀಡಿದ ಸಹಕಾರಕ್ಕೆ ಮತ್ತು ಪ್ರೀತಿಗೆ ನಾನು ಚಿರರುಣಿಯಾಗಿರುತ್ತೇನೆ ದೇವರು ಸದಾ ತಮ್ಮನ್ನು ಹರಸಲಿ ಹಾಗೂ ಕಾಪಾಡಲಿ ಹಾಗು ತಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ನೆನೆಸಿಕೊಳ್ಳಿರಿ ಎಂದು ಎಂದು ನುಡಿದರು. ಕಾರ್ಯಕ್ರಮವನ್ನು ಜಾನ್ ಅರ್ವೀನ್ ಡಿಸೋಜ ನಿರೂಪಿಸಿದರು ಹಾಗೂ ಸಮಿತಿಗಳ ಸಂಚಾಲಕರಾದ ಲಾನ್ಸಿ ಪಿರೇರಾ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.