ದಿಡುಪೆ ಕಲ್ಬೆಟ್ಟು ಸೇತುವೆ ಅಪಾಯದಲ್ಲಿ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊಲ್ಲಿ ದೇವಸ್ಥಾನದಿಂದ ದಿಡುಪೆಗೆ ಸಂಪರ್ಕ ಸಾಧಿಸುವ ನೇತ್ರಾವತಿ ಕಿನಾರೆಯ ಕಲ್ಬೆಟ್ಟು ಎಂಬಲ್ಲಿನ ಸೇತುವೆ ಭಾರೀ ಮಳೆಗೆ ಅಪಾಯಕಾರಿ ಸ್ಥಿತಿ ಎದುರಿಸುತ್ತಿದೆ.

ಮಲವಂತಿಗೆ ಗ್ರಾಮದ ದಿಡುಪೆಯ ಕಲ್ಬೆಟ್ಟು ಎಂಬಲ್ಲಿ ನೇತ್ರಾವತಿ ನದಿಗೆ ಇರುವ ಈ ಸೇತುವರಗೆ ಮಳೆನೀರು ಬಡಿಯುತ್ತಿದ್ದು ಮಣ್ಣು ಕೊಚ್ಚಿಹೋಗಿದೆ.

ಆ.5 ರಂದು ಈ‌ ನದಿಯಲ್ಲಿ ಭಾರೀ ನೀರು ಹರಿದುಬಂದಿದೆ.  ಇದೇ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಇದೇ ಸೇತುವೆ ಬಳಸಿ ಅತ್ತಿಂದಿತ್ತ ಸಮನಚರಿಸುವ ಸಾರ್ವಜನಿಕರಿಗೆ ಸಂಪರ್ಕ ಸಮಸ್ಯೆ ಏರ್ಪಡಲಿದೆ.

ಸ್ಥಳೀಯ ಹೈನುಗಾರರು ಹಾಗೂ ಕೃಷಿಕರಿಗೆ, ಕೂಲಿ‌ ಕಾರ್ಮಿಕರಿಗೆ ಹಾಗೂ ಎಲ್ಲಾ ವರ್ಗದ ಜನರಿಗೆ ಈ ಸೇತುವೆ ಅತ್ಯಂತ ಪ್ರಮುಖ ಸಂಪರ್ಕ ದಾರಿಯಾಗಿದೆ.

ಸುಮಾರು 100 ರಿಂದ 150 ಕುಟುಂಬಕ್ಕೂ ಹೆಚ್ಚು ಜನ ಇದನ್ನು ಬಳಸುತ್ತಿದ್ದು, ಪ್ರಮುಖವಾಗಿ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ದಿಡುಪೆಗೆ ಇದು ಸಂಪರ್ಕ ಕೊಂಡಿಯಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.