ಬೆಳ್ತಂಗಡಿ: ಜೇಸಿರೇಟ್ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ

ಬೆಳ್ತಂಗಡಿ: ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಜೇಸಿರೆಟ್ ವಿಭಾಗದಿಂದ ರಕ್ಷಾಬಂಧನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಪ್ರಯುಕ್ತ ಬೆಳ್ತಂಗಡಿ ಸುಧೆಮುಗೇರು ವೃದ್ಧಾಶ್ರಮಕ್ಕೆ ಭೇಟಿ ನೀಡಿ ದಿನ ನಿತ್ಯದ ಅಗತ್ಯ ವಸ್ತುಗಳನ್ನು ನೀಡ ಲಾಯಿತು. ಬಳಿಕ ಜೇಸಿ ಭವನದಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಸಲಾಯಿತು.


ಈ ಸಂದರ್ಭದಲ್ಲಿ ಜೇಸಿ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಜೇಸಿರೇಟ್ ಅಧ್ಯಕ್ಷೆ ಹೇಮಾವತಿ,ಕಾರ್ಯದರ್ಶಿ ಸ್ವರೂಪ್ ಶೇಖರ್, ಕಿರಣ್ ಕುಮಾರ್ ಶೆಟ್ಟಿ, ಚಿದಾನಂದ ಇಡ್ಯ, ನಿಕಟಪೂರ್ವಧ್ಯಕ್ಷ ಪ್ರಶಾಂತ್ ಲಾಯಿಲ, ಪೂರ್ವಧ್ಯಕ್ಷ ವಸಂತ ಶೆಟ್ಟಿ,ಉಪಾಧ್ಯಕ್ಷ ಪ್ರಸಾದ್ ಕಕ್ಕಿಂಜೆ,ಸದಸ್ಯರಾದ ಜಯರಾಜ್ ನಡಕ್ಕರ, ಉದಯ ಬಂಗೇರ, ಕೆ ಜೆಜೆಸಿ ಅಧ್ಯಕ್ಷ ಸೃಜನ್ ಶೆಟ್ಟಿ, ವೃದ್ಧಾಶ್ರಮ ದ ಮೇಲ್ವಿಚಾರಕರಾದ ಅಂಬಿಕಾ ಸಿಸ್ಟರ್, ಜಲಜ ಪಿ ನಾಯರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.