ಬೆಳ್ತಂಗಡಿ: ಆಗಸ್ಟ್ 5 ರ ಅಯೋಧ್ಯ ಭೂಮಿ ಪೂಜೆ ಹಿನ್ನಲೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳ ಶಾಂತಿ ಸಮಿತಿ ಸಭೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳ ಶಾಂತಿ ಸಮಿತಿ ಸಭೆಯನ್ನು ಆಗಸ್ಟ್ 5 ರ ಅಯೋಧ್ಯ ಭೂಮಿ ಪೂಜೆ ಹಿನ್ನಲೆಯಲ್ಲಿ ಠಾಣಾ ಸಭಾಂಗಣದಲ್ಲಿ ಪಿಎಸ್ಐ ನಂದಕುಮಾರ್ ಎಂಎಂ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಅಯೋಧ್ಯೆಯಲ್ಲಿ ಮಂದಿರಕ್ಕಾಗಿ ಭೂಮಿ ಪೂಜೆ ಕಾರ್ಯಕ್ರಮ ನಡೆಯುತ್ತಿದ್ದು, ಈ ಸಂದರ್ಭ ಹಿಂದೂ,ಮುಸ್ಲಿಂ, ಕ್ರೈಸ್ತ, ಹಾಗೂ ಎಲ್ಲಾ ಸಂಘಟನೆಯ ಮುಖಂಡರು ಕಾನೂನಿಗೆ ಗೌರವ ಕೊಟ್ಟು ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರ ಜೊತೆ ಸಹಕರಿಸಬೇಕೆಂದರು. ಸಭೆಯಲ್ಲಿ ಬೆಳ್ತಂಗಡಿಯ ಶಂಕರ್ ಹೆಗ್ಡೆ,ಎಸ್ ಡಿಪಿ ಐ ಯ ಅಕ್ಬರ್ ಆಲಿ, ಕುವೆಟ್ಟು ಗ್ರಾಮ ಪಂ. ಮಾಜಿ ಅಧ್ಯಕ್ಷ ಅಶೋಕ್‌ ಕೋಟ್ಯಾನ್, ಕಾಜೂರಿನ ರಫೀಕ್ ಮುಂತಾದವರು ಹಾಜರಿದ್ದರು. ಪ್ರೊ.ಪಿಎಸ್ಐ ಶರತ್ ಕುಮಾರ್ ಉಪಸ್ಥಿತರಿದ್ದ ಸಭೆಯನ್ನು ಸಿಬ್ಬಂದಿ ಪಿ ಎಸ್ ವೆಂಕಪ್ಪ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.