ಅಳದಂಗಡಿ: ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರದಿಂದ ವೈದ್ಯಕೀಯ ನೆರವು; ಬೈಕ್ ಅಪಘಾತದಲ್ಲಿ ಗಂಬೀರ ಗಾಯಗೊಂಡ ಕಿರಣ್ ಶೆಟ್ಟಿಯವರಿಗೆ ರೂ 10 ಸಾವಿರ ಹಸ್ತಾಂತರ

ಅಳದಂಗಡಿ:ಹಿಂದು ಯುವ ಶಕ್ತಿ ಆಲಡ್ಕ ಕ್ಷೇತ್ರದ ತಂಡದ 28 ನೇ ಸೇವಾ ಯೋಜನೆ ರೂ 10 ಸಾವಿರವನ್ನು ಮಂಗಳೂರು ಸಮೀಪದಲ್ಲಿ ಅಪಘಾತಕ್ಕೊಳಗಾಗಿ ಬಲಕಾಲಿನ ಮೂಳೆ ಮುರಿದು ನಡೆಯಲು ಕಷ್ಟಪಡುತ್ತಿರುವ ಕಿರಣ್ ಶೆಟ್ಟಿಯವರಿಗೆ ನೀಡಲಾಯಿತು.


ಕಳೆದ 3 ವರ್ಷದಿಂದ ಹಿಂದು ಯುವ ಶಕ್ತಿ ಆಲಡ್ಕ ಕ್ಷೇತ್ರದ ತಂಡದಿಂದ ಹಲವಾರು ಸಮಾಜಮುಖಿ ಕಾರ್ಯಗಳು ನಡೆಯುತ್ತಿದ್ದು ಇತರರಿಗೆ ಮಾದರಿಯಾಗಿದ್ದಾರೆ.

ಈ ಸಂದರ್ಭದಲ್ಲಿ ತಂಡದ ಗೌರವ ಅಧ್ಯಕ್ಷ ಶಿವಪ್ರಸಾದ್ ಅಜಿಲ, ಪಡಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ಪ್ರತೀತ್ ಅಜಿಲ, ಸುದ್ದಿಬಿಡುಗಡೆ ವಾರಪತ್ರಿಕೆಯ ವರದಿಗಾರ ಸಂತೋಷ್ ಪಿ ಕೋಟ್ಯಾನ್ ಬಳಂಜ, ಗೌರವ ಸಲಹೆಗಾರರ ರಾಜಶೇಖರ ಶೆಟ್ಟಿ,ನಿವೃತ್ತ ಸೈನಿಕ ಮೋಹನ್ ಕುಲಾಲ್, ಸಮಿತಿ ಅಧ್ಯಕ್ಷ ಸಂತೋಷ್ ಕಟ್ಟೆ, ಸಂಚಾಲಕ ದೇವದಾಸ್ ಕಾಪಿನಡ್ಕ, ವಾಮದಪದವು ಹಿಂದು ಜಾಗರಣ ವೇದಿಕೆ ಅಧ್ಯಕ್ಷ ಹೇಮಂತ್ ಕೋಟ್ಯಾನ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.