ಪದೇ ಪದೇ ಕೈಕೊಡುವ ಪೆರಿಂಜೆ ಬಿಎಸ್ಸೆನ್ನೆಲ್ ಟವರ್!

ವೇಣೂರು: ಪದೇ ಪದೇ ಕೈಕೊಡುವ ನೆಟ್‌ವರ್ಕ್‌ನಿಂದ ಸಮಸ್ಯೆ ಅನುಭವಿಸುತ್ತಿದ್ದೇವೆ ಎಂದು ಪೆರಿಂಜೆ ಪರಿಸರದ ಬಿಸ್ಸೆನ್ನೆಲ್ ಗ್ರಾಹಕರು ಆರೋಪಿಸಿದ್ದಾರೆ.


ವಿದ್ಯುತ್‌ನ ಸಂಪರ್ಕ ಕಡಿತಗೊಂಡಾಗ ನೆಟ್‌ವರ್ಕೂ ಕಡಿತಗೊಳ್ಳುವುದು ಮಾಮೂಲಿ ಆಗಿರುವ ಇಲ್ಲಿ ವಿದ್ಯುತ್ ಇದ್ದರೂ ಕಳೆದ ಹಲವು ದಿನಗಳಿಂದ ಪದೇ ಪದೇ ನೆಟ್‌ವರ್ಕ್ ಕೈಕೊಡುತ್ತಿದೆ. ಇದೀಗ ಮಕ್ಕಳ ಇಂಟರ್‌ನೆಟ್ ಮೂಲಕ ಆನ್‌ಲೈನ್ ತರಗತಿಗಳು ನಡೆಯುತ್ತಿದ್ದು, ನೆಟ್‌ವರ್ಕ್ ಸಮಸ್ಯೆಯಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಡಚಣೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಸಂಬಂಧಿತ ಅಧಿಕಾರಿಗಳು ತಕ್ಷಣ ಟವರ್‌ನಲ್ಲಿರುವ ಲೋಪವನ್ನು ಸರಿಪಡಿಸಿ ನೆಟ್‌ವರ್ಕ್ ಸಮಸ್ಯೆಯನ್ನು ನಿವಾರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

                        ವರದಿ: ಪದ್ಮನಾಭ ವೇಣೂರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.