ಕೊರೋನಾ ವಾರಿಯರ್ಸ್ ಸೇವೆ ಸ್ಮರಣೀಯ: ಸಂತೋಷ್ ಕುಮಾರ್ ಲಾಯಿಲಾ; ಆಶಾಕಾರ್ಯಕರ್ತೆ ಕುಟುಂಬಕ್ಕೆ ಆಹಾರ ಸಾಮಗ್ರಿ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

­

ಬೆಳ್ತಂಗಡಿ: ಕೊರೋನಾ ವಾರಿಯರ್ಸ್ ಕೊರೋನಾ ನಿಯಂತ್ರಣಕ್ಕೆ ಅಹರ್ನಿಶಿ ದುಡಿದು ಸಾರ್ವಜನಿಕರಲ್ಲಿ ಅರಿವು ಮೂಡಿಸಿದ ಪರಿಣಾಮ ‌ಕೊರೋನಾ ಸೋಂಕು‌ ಹರಡುವುದು ‌ಕಡಿಮೆಯಾಗಿದೆ. ಆ.2 ರಂದು ಕೊರೋನಾ ವಾರಿಯರ್ಸ್ ಸಂಕಷ್ಟದಲ್ಲಿದ್ದು ಅವರ ಸೇವೆಯನ್ನು ಸ್ಮರಿಸಿ ಅವರಿಗೆ ಸಮಾಜ ಸಹಾಯ ಮಾಡಬೇಕಿದೆ ಎಂದು‌ ತಾಲೂಕು ಯುವ ಮರಾಟಿ ಸೇವಾ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಲಾಯಿಲಾ ಹೇಳಿದರು. 

ಅವರು ಮದ್ದಡ್ಕದ ನೇರಳಕಟ್ಟೆ ನಿವಾಸಿ ಆಶಾ ಕಾರ್ಯಕರ್ತೆ ಜಯಂತಿ ಅವರ ನಿವಾಸಕ್ಕೆ ಭೇಟಿಯ ‌ನೀಡಿ‌, ಕೊರೋನಾದಿಂದ ಗುಣಮುಖರಾದ ಅವರ ಪತಿ ಡೀಕಯ್ಯ ನಾಯ್ಕ್‌ ಅವರಿಗೆ ಸ್ಥೈರ್ಯ ತುಂಬಿ ಕುಟುಂಬಕ್ಕೆ ಆಹಾರ ಸಮಗ್ರಿಗಳ ಕಿಟ್ ವಿತರಿಸಿ ಮಾತನಾಡಿದರು.
ಕೊರೊನಾದಿಂದ ಎಲ್ಲ ವರ್ಗದ ಜನತೆ ಸಂಕಷ್ಟದಲ್ಲಿದ್ದಾರೆ. ಆದರೆ ಇಂತಹ ಕಷ್ಟದ ಸನ್ನಿವೇಶವನ್ನು ಧೈರ್ಯದಿಂದ ಎದುರಿಸಬೇಕಿದೆ. ಮುಖ್ಯವಾಗಿ ಕೊರೋನಾ ತಡೆಯಲು ಮಾಸ್ಕ್ ಧರಿಸಿ ವೈದ್ಯರು ಸೂಚಿಸಿರುವ ಮುನ್ನೆಚ್ಚರಿಕೆ ಪಾಲಿಸುವುದು ಅಗತ್ಯವಾಗಿದೆ ಎಂದರು.
ಯುವ ಮಾರಾಟಿ ಸೇವಾ ಸಂಘ ತಾಲೂಕು ಸಮಿತಿ ಕಾರ್ಯದರ್ಶಿ ಪ್ರಸಾದ್ ನಾಯ್ಕ್, ಕ್ರೀಡಾ ಸಮಿತಿ ಕಾರ್ಯದರ್ಶಿಗಳಾದ ಹೆಚ್.ಎಲ್. ಸತೀಶ್, ಮೋಹನ್ ಕೊಯ್ಯೂರು, ಮದ್ದಡ್ಕ-ಓಡಿಲ್ನಾಳ ಗ್ರಾಮ ಸಮಿತಿ ‌ಉಪಾಧ್ಯಕ್ಷ ಸುಂದರ ನಾಯ್ಕ್ ಮದ್ದಡ್ಕ, ಕಾರ್ಯದರ್ಶಿ ರಾಜೇಶ್ ನಾಯ್ಕ್ ನಾನಾಡಿ, ಸದಸ್ಯರಾದ ಪುರಂದರ ನಾಯ್ಕ್ ಪಣಕಜೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.