ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಲಾಯಿಲ ಗ್ರಾ.ಪಂ ವತಿಯಿಂದ ಉಚಿತ ಕೋವಿಡ್-19 ಪರೀಕ್ಷೆ

ಬೆಳ್ತಂಗಡಿ: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬಾಧಿತರ ಗಂಟಲು ದ್ರವ ಪರೀಕ್ಷೆ ವರದಿಗಾಗಿ ಎರಡು-ಮೂರು ದಿನ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದನ್ನ ನಿವಾರಿಸುವ ನಿಟ್ಟಿನಲ್ಲಿ ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಪರೀಕ್ಷೆಯನ್ನು ನಡೆಸಲು ಸರಕಾರ ಆದೇಶ ನೀಡಿದೆ.

ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಉಜಿರೆ ಹಾಗೂ ಲಾಯಿಲ ಗ್ರಾ.ಪಂ ವತಿಯಿಂದ ಉಚಿತ ಕೋವಿಡ್-19 ಪರೀಕ್ಷೆಯನ್ನು ಜು.31 ರಂದು ಲಾಯಿಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ಏರ್ಪಡಿಸಲಾಯಿತು.. ಗ್ರಾಮಸ್ಥರು ಇದರ ಸದುಪಯೋಗ ಪಡೆಯುತ್ತಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ಪಂಚಾಯತ್ ಪ.ಅ.ಅಧಿಕಾರಿ ವೆಂಕಟ್ ಕ್ರಷ್ಣ, ಕಾರ್ಯದರ್ಶಿ ರೇಷ್ಮ, ತಾ.ಪಂಚಾಯತ್ ಸುದಾಕರ, ಗ್ರಾಮ ಲೆಕ್ಕಿಗ ರಣೀತ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.