ನಮ್ಮಿಂದ ಸಮಾಜಕ್ಕೆ ಹರಡದಂತೆ ಎಚ್ಚರ ವಹಿಸುವುದು ನಮ್ಮ ಜವಾಬ್ದಾರಿ- ಅಮ್ಮಿ ಸಿಸ್ಟರ್; ಮುಂಡಾಜೆಯಲ್ಲಿ ಉಚಿತ ಕೊರೊನಾ ಪರೀಕ್ಷೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ನಮ್ಮನ್ನು ನಾವೇ ಕೊರೊನಾ ಪರೀಕ್ಷೆಗೊಳಪಡಿಸಿಕೊಂಡು ದೃಢಪಡಿಸಿಕೊಂಡರೆ ನಮ್ಮ ಅರೋಗ್ಯ ರಕ್ಷಣೆ ಜೊತೆಗೆ ನಮ್ಮಿಂದಾಗಿ ಸಮಾಜದ ಇತರರಿಗೆ ಹರಡದಂತೆ ಎಚ್ಚರವಹಿಸಿಕೊಳ್ಳಬಹುದಾಗಿದೆ. ಇದು ಅತ್ಯಂತ ಪ್ರಾಮುಖ್ಯವಾದ ವಿಚಾರ ಎಂದು ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸಿಸ್ಟರ್ ಹೇಳಿದರು.

ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಗ್ರಾಮ ಪಂಚಾಯತ್ ಮುಂಡಾಜೆ, ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಬೆಳ್ತಂಗಡಿ, ಲಯನ್ಸ್ ಕ್ಲಬ್ ಬೆಳ್ತಂಗಡಿ ಹಾಗೂ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಇವುಗಳ ಆಶ್ರಯದಲ್ಲಿ ಜು.30 ರಂದು ಉಚಿತವಾಗಿ ಕೊರೊನಾ ರೋಗಲಕ್ಷಣಗಳ ಉಚಿತ ತಪಾಸಣೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಂಡಾಜೆ ಗ್ರಾ.ಪಂ.ನ ಸಭಾಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಪಿ.ಸಿ ಸೆಬಾಸ್ಟಿಯನ್ ವಹಿಸಿದ್ದರು.

ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಶ್ರಫ್ ಆಲಿಕುಂಞಿ, ಲಯನ್ಸ್ ಕ್ಲಬ್ ಸದಸ್ಯ ನಾಮದೇವ ರಾವ್, ಗ್ರಾ.ಪಂ ನಿಕಟಪೂರ್ವ ಸದಸ್ಯ ನಾರಾಯಣ ಗೌಡ ದೇವಸ್ಯ, ಗ್ರಾ.ಪಂ ಸಿಬ್ಬಂದಿ ಕೇಶವತಿ, ರಾಜಕೇಸರಿ ಬೆಳ್ತಂಗಡಿ ಅಧ್ಯಕ್ಷ ಕಾರ್ತಿಕ್ ಮೊದಲಾದವರು ಉಪಸ್ಥಿತರಿದ್ದರು.

ನಾಲ್ವರು ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನ;

ಗ್ರಾಮದ ನಾಲ್ಕು ಬ್ಲಾಕ್ ಗಳಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಕರ್ತವ್ಯದಲ್ಲಿರುವ ನಾಲ್ವರು ಆಶಾ ಕಾರ್ಯಕರ್ತೆಯರಾದ ಚಂದ್ರಾವತಿ, ಬಿ.ಕೆ ಶಶಿ, ಗಾಯತ್ರಿ ರೈ ಮತ್ತು ಜಯಂತಿ ಅವರನ್ನು ಅಭಿನಂದಿಸಲಾಯಿತು. ನಿವೃತ ರೇಷ್ಮೆ ಅಧಿಕಾರಿ ಬಾಬು ಪೂಜಾರಿ ಕೂಳೂರು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.