ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾದಿಂದ ವನಮಹೋತ್ಸವ

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಮತ್ತು ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅವರ ನಿರ್ದೇಶನದಂತೆ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾದಿಂದ ಗಿಡ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.  ತಾಲೂಕಿನ 81 ಗ್ರಾಮಗಳ ಬೂತ್ ಗಳಲ್ಲಿ ಯುವ ಮೋರ್ಚಾದ ಪದಾಧಿಕಾರಿಗಳು ತಮ್ಮ ತಮ್ಮ ಮನೆಗಳಲ್ಲಿ ಹಾಗೂ ಗುಡ್ಡ ಪ್ರದೇಶಗಳಲ್ಲಿ ವಿವಿಧ ಜಾತಿಯ ಸುಮಾರು ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ಯಶವಂತ್ ಗೌಡ ಬೆಳಾಲು, ಕಾರ್ಯದರ್ಶಿ ಉಮೇಶ್ ಕುಲಾಲ್ ಪದಾಧಿಕಾರಿಗಳಾದ ಪ್ರಮೋದ್ ಗೌಡ ,ವಿನಿತ್ ಕೋಟ್ಯಾನ್ ,ವಸಂತಕುಂಬಾರ ಚಂದ್ರಕಾಂತ್, ರಂಜು ಕೊಕ್ಕಡ ,ಪ್ರದೀಪ್ ಉಜಿರೆ ,ಪ್ರಸ್ತುತ್ ಜೈನ್, ಸುಧಾಕರ್, ಗಿರೀಶ್ ನಿಡ್ಲೆ ,ದಿವಿನ್ ಚಾರ್ಮಾಡಿ ,ಸುಕೇಶ್ ಪಡಂಗಡಿ, ಓಂಕಾರ್ ಜೈನ್, ಪ್ರಕಾಶ್ ,ಕಾರ್ತಿಕ್ ಇಳಂತಿಲ,ಅಶೋಕ ಪಡಂಗಡಿ, ರಾಜೇಶ್ ಹರೀಶ್, ರೋಷನ್, ಸುಧಾಕರ್ ಹಾಗೂ ಗ್ರಾಮ ಮಟ್ಟದ ಕಾರ್ಯಕರ್ತರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.