ಮದ್ದಡ್ಕ : ಯಕ್ಷಪ್ರಶ್ನೆ ಕಿರುಚಿತ್ರ ಬಿಡುಗಡೆ ತಂದೆ ಮಗನ ವೈರುದ್ಯದ ವಿಭಿನ್ನ ಕಥಯ ಕಿರುಚಿತ್ರ    

ಮದ್ದಡ್ಕ : ಬದುಕಿನ ಅನಿರೀಕ್ಷಿತ ತಿರುವುಗಳಲ್ಲಿ ಸಂಬಂಧದ ಮಜಲು ಅದೆಷ್ಟೋ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಕೆಲವೊಂದು ಪ್ರಶ್ನೆಗಳಿಗೆ ಸಂಧರ್ಭ, ಪರಿಸ್ಥಿತಿ ಉತ್ತರಿಸಿದರೆ ಇನ್ನು ಕೆಲವು ಪ್ರಶ್ನೆಗಳಿಗೆ ಬದುಕಿನ ಕೊನೆಯವರೆಗೂ ಉತ್ತರ ಸಿಗದೇ ಹೋಗಬಹುದು, ತಂದೆ ಮಗನ ವೈರುದ್ಯದ ವಿಭಿನ್ನ ಕಥಾಹಂದರವಿರುವ ‘ಯಕ್ಷಪ್ರಶ್ನೆ’ ಕಿರುಚಿತ್ರದ ಬಿಡುಗಡೆಯು ಇತ್ತಿಚೀಗೆ ನಡೆಯಿತು‌.

“ಯಕ್ಷಪ್ರಶ್ನೆ” ಎಂಬ ವಿಭಿನ್ನ ಶೈಲಿಯ ಕಿರುಚಿತ್ರವನ್ನು ಕಲಾಸಕ್ತರ ಕೂಟವೊಂದು ಶಿವಗಿರಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿ ಯೂಟ್ಯೂಬ್ ಚಾನೆಲ್’ನಲ್ಲಿ ಬಿಡುಗಡೆ ಮಾಡಿದ್ದಾರೆ. ಕಲಾಪ್ರಿಯರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದ್ದು ಗಣ್ಯಾತಿಗಣ್ಯರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,

ಮುಖ್ಯ ಭೂಮಿಕೆಯಲ್ಲಿ ರೂಪಶ್ರೀ ವರ್ಕಾಡಿ, ಶಿವಪ್ರಕಾಶ್ ಪೂಂಜ ಹರೇಕಳ, ಲ| ಕದ್ರಿ ನವನೀತ ಶೆಟ್ಟಿ, ಶಿವಕುಮಾರ್ ಮೂಡುಬಿದಿರೆ, ಪ್ರಭಾಕರ್ ಕರ್ಕೇರ, ಮದ್ದಡ್ಕ ಅವಿನಾಶ್ ಬಂಗೇರವರೊಂದಿನ ಅನೇಕ ಹೆಸರಾಂತ ಕಲಾವಿದರು ಬಣ್ಣ ಹಚ್ಚಿದ್ದಾರೆ, ಚಿತ್ರಕ್ಕೆ ಸಂಗೀತವನ್ನು ರಾಜೇಶ್ ಭಟ್ ನೀಡಿದ್ದಾರೆ, ಹಿನ್ನಲೆ ಸಂಗೀತ ಶ್ರೀನಾಥ್ ಅಂಚನ್, ಸಂಕಲನ ಮಹೇಶ್ ಶೆಣೈ, ಕಥೆಯನ್ನು ಹೆಣೆದು ಸಾಹಿತ್ಯವನ್ನು ಒದಗಿಸಿದ್ದಾರೆ ಸುಶಾಂತ್ ಕೋಟ್ಯಾನ್ ಸಚ್ಚರಿಪೇಟೆವರು, ಚಿತ್ರಕ್ಕೆ ಛಾಯಾಗ್ರಹಣ ದರ್ಶನ್ ಆಚಾರ್ಯ ಆಯನೂರು ಮತ್ತು ಸುಮಂತ್ ಪೂಜಾರಿ, ನಾಯಕನ ಪಾತ್ರ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ಅವಿನಾಶ್ ಬಂಗೇರ ಹೊತ್ತಿದ್ದು,   ಚಿತ್ರಕಥೆ-ಸಂಭಾಷಣೆ-ನಿರ್ದೇಶನವನ್ನು ಸಂತೋಷ್ ಮಾಡಿದ್ದಾರೆ. ಚಿತ್ರೀಕರಣ ಕುವೆಟ್ಟು ಜಗದೀಶ್ ಬಂಗೇರರವರ ಮನೆಯಲ್ಲಿ ನಡೆದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.