ಬೆಳ್ತಂಗಡಿ: ಕಾಗಿ೯ಲ್ ವಿಜಯೋತ್ಸವ ಆಚರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ,  ಮಾಜಿ ಸೈನಿಕರ ಸಂಘ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ  ಬೆಳ್ತಂಗಡಿ ಇವುಗಳ ಸಹಭಾಗಿತ್ವದಲ್ಲಿ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸಭಾಭವನದಲ್ಲಿ ಕಾರ್ಗಿಲ್ ವಿಜಯ ದಿನವನ್ನು ಜು 25ರಂದು     ಆಚರಿಸಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ರೋ.ಬಿ.ಕೆ.ಧನಂಜಯ ರಾವ್ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಮೇ.ಜನರಲ್ ನಿವೃತ್ತ ಎಂ.ವಿ.ಭಟ್, ವಿಧಾನ ಪರಿಷತ್ ಸದಸ್ಯರಾದ ಕೆ.ಪ್ರತಾಪಸಿಂಹ ನಾಯಕ್, ಮಾಜಿ ಸೈನಿಕ ಸಂಘದ ಅಧ್ಯಕ್ಷರಾದ ಕೃಷ್ಣ ಭಟ್, ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ದಿನೇಶ್ ಕುಮಾರ್.ಎಂ.ಎಸ್, ಮಾಜಿ ಸೈನಿಕ ಸಂಘದ ಕಾರ್ಯದರ್ಶಿಗಳಾದ ಹೆರಾಲ್ಡ್ ಸಿಕ್ವೇರಾ, ಗ್ರಾಮ ಪಂಚಾಯತ್ ಲಾಯಿಲದ ಉಪಾಧ್ಯಕ್ಷರಾದ ಗಿರೀಶ್ ಡೋಂಗ್ರೆ ಯವರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿಯ ಪೂರ್ವಾಧ್ಯಕ್ಷರಾದ ಡಾ.ಶಶಿಧರ ಡೋಂಗ್ರೆಯವರು ಪ್ರಾಯೋಜಿಸಿದ ರೂ.25000/- ವನ್ನು ಮಾಜಿ ಸೈನಿಕ ಗೋಕುಲದಾಸ್ ಭಟ್ ಲಾಯಿಲ ಇವರ 3 ಮಕ್ಕಳಿಗೆ ವಿದ್ಯಾರ್ಥಿ ವೇತನದ ರೂಪದಲ್ಲಿ ನೀಡಲಾಯಿತು. ಇತ್ತೀಚಿಗಷ್ಟೇ ಭೂ ಸೇನೆಯಿಂದ ನಿವೃತ್ತಿ ಹೊಂದಿ ಬಂದಿರುವ ಸೈನಿಕ ವಿನೋದ್ ರವರನ್ನು  ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ರೋ.ಪ್ರತಾಪಸಿಂಹ ನಾಯಕ್ ರವರನ್ನು ಸನ್ಮಾನಿಸಲಾಯಿತು.  .ಶ್ರಾವ್ಯ ಡೋಂಗ್ರೆ ಹಾಗೂ ಕು.ಶ್ರೇಯಾ ಡೋಂಗ್ರೆ ದೇಶಭಕ್ತಿ ಗೀತೆ ಹಾಡಿದರು.  . ರೋ.ಬಿ.ಕೆ.ಧನಂಜಯ ರಾವ್ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ರೋ.ಶ್ರೀಧರ್ ಕೆ.ವಿ.ಯವರು ಧನ್ಯವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.