ಸೋಜಾ ಇಲೆಕ್ಟ್ರಾನಿಕ್ಸ್ ಬೆಳ್ಳಿಹಬ್ಬ ಪ್ರಯುಕ್ತ ಪ್ರತಿಭಾ ಪುರಸ್ಕಾರ

ಬೆಳ್ತಂಗಡಿ: ವ್ಯಾಪಾರಧರ್ಮ ಪಾಲನೆ ಮತ್ತು ವಿಶ್ವಾಸಾರ್ಹ ಸೇವೆಯ ಮೂಲಕ ಹೆಸರುವಾಸಿಯಾಗಿ ಪ್ರಸ್ತುತ ವರ್ಷ ಬೆಳ್ಳಿಹಬ್ಬ ಆಚರಿಸುತ್ತಿರುವ ಸೋಜಾ ಎಲೆಕ್ಟ್ರಾನಿಕ್ಸ್ ಬೆಳ್ತಂಗಡಿ ವತಿಯಿಂದ, ಈ ವರ್ಷದ ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಪ್ರಧಾನ ಅತಿಥಿಗಳಾಗಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ತಾಲೂಕಿನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್ ಇವರು ಉಪಸ್ಥಿತರಿದ್ದರು.

ಈ ಬಾರಿ ಪಿಯುಸಿ ಫಲಿತಾಂಶ ದಲ್ಲಿ ಸಾಧನೆ ಮೆರೆದ ಕುವೆಟ್ಟು ಗ್ರಾಮದ ಜೆರಾಲ್ಡ್ ಫ್ರಾಂಕೊ ಮತ್ತು ಪ್ರೇಮಲತಾ ಫ್ರಾಂಕೊ ದಂಪತಿ ಪುತ್ರಿ ಡೀನಾ ಮರಿಯಾ ಫ್ರಾಂಕೊ (ಶೇ.92) ಇವರನ್ನು ಸುದರ್ಶನ್ ಮೂಡಬಿದ್ರೆಯವರು ಸನ್ಮಾನಿಸಿದರೆ, ಸಂಸ್ಥೆಯ ಮ್ಯಾನೇಜರ್ ಲ್ಯಾನ್ಸಿ ಡಿಸೋಜಾ ಇವರ ಪುತ್ರಿ ಲೊರೆನ್ ಪ್ರೀತಿ ಡಿಸೋಜಾ ( ಶೇ. 83) ಅವರನ್ನು ಆರ್.ಪಿ ಕನ್ಸ್‌ಸ್ಟ್ರಕ್ಷನ್ ಮಾಲಕರಾದ ರಾಹುಲ್ ಪಿ ಇವರು ಸನ್ಮಾನಿಸಿದರು.

ಬಳಿಕ ವಿಶೇಷ ಅತಿಥಿ ಸುದರ್ಶನ್ ಮೂಡಬಿದ್ರೆ ಅವರನ್ನು ಸಂಸ್ಥೆಯ ಆಡಳಿತ ಪಾಲುದಾರ ಅಲ್ಫೋನ್ಸ್ ಫ್ರಾಂಕೊ ಇವರು ಸನ್ಮಾನಿಸಿದರು.
ಇವರ ಅಭಿನಂದನಾ ಪತ್ರವನ್ನು ಸಂಸ್ಥೆಯ ಪಬ್ಲಿಕ್ ರಿಲೇಶನ್‌ಶಿಪ್ ಆಫೀಸರ್ ದೀಪ್ತಿ ಬಂಗೇರ ಇವರು ವಾಚಿಸಿದರೆ,ಪ್ರತಿಭಾನ್ವಿತರ ಸನ್ಮಾನ ಪತ್ರವನ್ನು ಸಂಸ್ಥೆಯ ಕಸ್ಟಮರ್ ಕೇರ್ ಆಫೀಸರ್ ಸ್ವಾತಿ ಟಿ ಇವರು ವಾಚಿಸಿದರು. ಸಮಾರಂಭದಲ್ಲಿ ಮಾತನಾಡಿದ ಸುದರ್ಶನ್ ಅವರು, ಸೋಜಾ ಎಲೆಕ್ಟ್ರಾನಿಕ್ಸ್ ಬೆಳ್ತಂಗಡಿ ತನ್ನ ಬೆಳ್ಳಿಹಬ್ಬದ ಪ್ರಯುಕ್ತ ಈ ರೀತಿಯಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಅನುಕರಣೀಯ. ಇದು ಮಾದರಿ ಎಂದರು. ಇತ್ತೀಚೆಗೆ ಗೌರವ ಡಾಕ್ಟರೇಟ್ ಪಡೆದ
ಬೆಳ್ತಂಗಡಿಯ ಖ್ಯಾತ ನೋಟರಿ ವಕೀಲರ ಗ್ಸೆವಿಯರ್ ಪಾಲೇಲಿ ಉಪಸ್ಥಿತರಿದ್ದು, ಸರಕಾರೀ ಅಂಗೀಕೃತ ತ್ರಿವರ್ಣ ಧ್ವಜವನ್ನು ಸುದರ್ಶನ್ ಅವರಿಗೆ ಹಸ್ತಾಂತರಿಸಿದರು.

ಸಂಸ್ಥೆಯ ಸೇಲ್ಸ್ ಎಕ್ಸಿಕ್ಯೂಟಿವ್ ರಮೇಶ್ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಮ್ಯಾನೇಜರ್ ಲ್ಯಾನ್ಸಿ ಡಿಸೋಜಾ ಸ್ವಾಗತಿಸಿದರು. ಸಂಸ್ಥೆಯ ಕಂಪ್ಯೂಟರ್ ವಿಭಾಗದ ಉಷಾ ಗೌಡ ಧನ್ಯವಾದವಿತ್ತರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.