ಬಂದಾರು : ಜೈಶ್ರೀರಾಮ್ ಗೆಳೆಯರ ಬಳಗದಿಂದ ವನಮಹೋತ್ಸವ

 

ಬಂದಾರು: ಜೈ ಶ್ರೀ ರಾಮ್ ಗೆಳೆಯರ ಬಳಗ (ರಿ )ಶ್ರೀ ರಾಮ ನಗರ ಬಂದಾರು ಇದರವತಿಯಿಂದ ಲಾಕ್ ಡೌನ್ ಸದುಪಯೋಗ ಆಗುವ ಉದ್ದೇಶದಿಂದ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಜೊತೆಗೆ ಕೂಡಿ ಯುವ ಶಕ್ತಿ ಗಳೆಲ್ಲ ಒಂದಾಗಿ.. *ಗಿಡಮರ ಬೆಳೆಸಿ ಪರಿಸರ ಉಳಿಸಿ ಎಂಬ ಧ್ಯೇಯ ವಾಕ್ಯ ದೊಂದಿಗೆ *”ವನಮಹೋತ್ಸವ* ಕಾರ್ಯಕ್ರಮವನ್ನು ಬಂದಾರು ಶ್ರೀ ರಾಮ ನಗರ ದ ಸಾರ್ವಜನಿಕ ಸ್ಮಶಾನದ ಸುತ್ತಮುತ್ತ ಸುಮಾರು 150ಕಿಂತಲೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಮಾಡಲಾಯಿತು.

ಈ ಕಾರ್ಯಕ್ರಮ ದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಬಿ. ಕೆ ಅರಣ್ಯ ರಕ್ಷಕರಾದ ಜಗದೀಶ್, ಜೈ ಶ್ರೀ ರಾಮ್ ಗೆಳೆಯ ಬಳಗ ದ ಅಧ್ಯಕ್ಷರರಾದ ಕುಶಾಲಪ್ಪ, ಕಾರ್ಯದರ್ಶಿ ಶ್ರೀಧರ್ ಹಾಗೂ ಬಳಗ ಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.