ಅನೂಪ್ ಕುಮಾರ್ ಜೈನ್ ನಿಧನ

Advt_NewsUnder_1
Advt_NewsUnder_1
Advt_NewsUnder_1

ಕೇಳ: ಇಲ್ಲಿಯ ಪಟ್ಣ ಶೆಟ್ಟಿ ಹೊಸಮನೆ ಕೇಳದ ಪೇಟೆ ಎಂ ಅನೂಪ್ ಕುಮಾರ್ ಜೈನ್(67ವ) ಜು.17 ರಂದು ನಿಧನರಾಗಿದ್ದಾರೆ.

ಕಳೆದ 6 ತಿಂಗಳಿನಿಂದ ಅನಾರೋಗ್ಯದಿಂದ ಇದ್ದು ಆರೋಗ್ಯದಲ್ಲಿ ಏರುಪೇರಾಗಿದ್ದು ಜು.16 ರಂದು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಲ್ಲಿ ಗಂಟಲು ದ್ರವ ಪರೀಕ್ಷಿಸಬೇಕೆಂದು ತಿಳಿಸಲಾಗಿದ್ದು ರಿಪೋರ್ಟ್ ಬರುವ ಮೊದಲೇ ನಿಧನರಾಗಿದ್ದರು. ಬಳಿಕ ಮೃತರ ಕೋವಿಡ್ ರಿಪೋರ್ಟ್ ಪಾಸಿಟಿವ್ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.
ಮೃತರು ಕಾಂಗ್ರೇಸ್ ಪಕ್ಷದ ಸಕ್ರೀಯ ಕಾರ್ಯಕರ್ತರು, ಬೆಳ್ತಂಗಡಿ ಪಿ.ಎಲ್.ಡಿ ಬ್ಯಾಂಕಿನ ಮಾಜಿ ನಿರ್ದೇಶಕರು, ಕಾಶಿಪಟ್ಣ ಗ್ರಾ.ಪಂ ಮಾಜಿ ಸದಸ್ಯರು. ಕೇಳದ ಪೇಟೆ ಅನಂತನಾಥ ಸ್ವಾಮಿ ಬಸದಿಯ ಕಾರ್ಯಧ್ಯಕ್ಷರು ಆಗಿದ್ದರು.

ಪತ್ನಿ ಅನಿತಾ, ಪುತ್ರಿಯರಾದ ಅಹಾನ, ಅಭಿಜ್ಞ, ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತಿಮ ಕ್ರಿಯೆ ಕೋವಿಡ್ ಕಾನೂನು ಪ್ರಕಾರ ಮಂಗಳೂರಿನ ಬೋಳಾರ್‌ನಲ್ಲಿ ನೆರವೇರಿಸಲಾಗಿದೆ. ಮೃತರ ಅಂತಿಮ ಕ್ರಿಯೆ ಹಾಗೂ ಎಲ್ಲಾ ವ್ಯವಸ್ಥೆಯನ್ನು ಕೆ.ಜಯಪ್ರಸಾದ್ ಜೈನ್ ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.