ಲಾಯಿಲ ಇಸ್ಪೀಟ್ ಅಡ್ಡೆಯಲ್ಲಿ ದರೋಡೆ: ಮೂವರ ಬಂಧನ-ರೂ.7ಲಕ್ಷ ನಗದು ವಶ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಲಾೈಲ ಗ್ರಾಮದ ಪಡ್ಲಾಡಿ ಎಂಬಲ್ಲಿ ಮೇ 29ರಂದು ಅಕ್ರಮವಾಗಿ ಇಸ್ಪೀಟ್ ಆಟವಾಡಿ ಪೊಲೀಸರಂತೆ ನಟಿಸಿ ಆಟದಲ್ಲಿ ನಿರತರಾಗಿದ್ದ ಚಿಕ್ಕಮಗಳೂರು ಮಳಲೂರು ನಿವಾಸಿ ಹೊಯ್ಸಳ ಜೆ.ಪಿ ಎಂಬವರ ರೂ. 10 ಲಕ್ಷ ನಗದು ಇದ್ದ ಬ್ಯಾಗನ್ನು ದರೋಡೆಗೈದ ಮೂವರು ಆರೋಪಿಗಳು ಬೆಳ್ತಂಗಡಿ ಪೊಲೀಸರಿಗೆ ಶರಣಾಗಿದ್ದಾರೆ.

 ಆರೋಪಿಗಳಾದ ಮುಸ್ತಾಪ, ಇಮ್ತಿಯಾಜ್ ಹಾಗೂ ಚೇರಿಮೋನು ಶರಣಾದ ಆರೋಪಿಗಳಾಗಿದ್ದು, ತನಿಖೆ ನಡೆಸಿದ ಬೆಳ್ತಂಗಡಿ ಸರ್ಕಲ್ ಇನ್ಸ್‍ಪೆಕ್ಟರ್ ಆರೋಪಿಗಳಿಂದ ರೂ. 7 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಮೂರು ಮಂದಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಲಾೈಲ ಗ್ರಾಮದ ಪಡ್ಲಾಡಿ ಬಳಿ  ನಡೆಯುತ್ತಿದ್ದ  ಇಸ್ಪೀಟ್ ಅಡ್ಡೆಗೆ  ಹೊಯ್ಸಳ ಜೆ.ಪಿ ಎಂಬವರು ಆಟವಾಡಲು ಬಂದಿದ್ದರು. ಇಸ್ಪೀಟ್ ಕ್ಲಬ್ ನಡೆಯುತ್ತೀರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಬೆಳ್ತಂಗಡಿ ಪೊಲೀಸರು ರಾತ್ರಿ ದಾಳಿ ನಡೆಸುತ್ತಿದ್ದಂತೆಯೇ ಇದನ್ನರಿತ ಮೂರು ಮಂದಿ ಆರೋಪಿಗಳು ಹೊಯ್ಸಳರ ರೂ.10 ಲಕ್ಷ ಇದ್ದ ನಗದನ್ನು ಕಸಿದು ಕತ್ತಲಲ್ಲಿ ಪರಾರಿಯಾಗಿದ್ದರು. ಬೆಳ್ತಂಗಡಿ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಸಂದೇಶ್ ಪ್ರಕರಣದ ತನಿಖೆ ನಡೆಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.