ತಾಯಿಯ ಮೇಲೆ ಮಗ ಹಾಗೂ ಮೊಮ್ಮಗನಿಂದ ಹಲ್ಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್: ಆರೋಪಿಗಳ ಬಂಧನ

ಬೆಳ್ತಂಗಡಿ: ಸವಣಾಲು ಗ್ರಾಮದ ಹಲಸಿನಕಟ್ಟೆ 5 ಸೆನ್ಸ್ ನಿವಾಸಿ ವಯೋ ವೃದ್ಧೆ ಮಹಿಳೆ ಶ್ರೀಮತಿ ಅಪ್ಪಿ ಶೆಡ್ತಿ(90) ಮೇಲೆ ಅವರ ಮೊಮ್ಮಗ ಪ್ರದೀಪ ಶೆಟ್ಟಿ ಹಾಗೂ ಮಗ ಶ್ರೀನಿವಾಸ ಶೆಟ್ಟಿ ಕಂಠಪೂರ್ತಿ ಕುಡಿದು ಅಮಾನೂಷವಾಗಿ ಹಲ್ಲೆ ನಡೆಸಿ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ವಿಷಯ ತಿಳಿದ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ.

ಅನ್ಯಾಯಕ್ಕೆ ಒಳಗಾದ ಸವಣಾಲು ಗ್ರಾಮದ ವಯೋವೃದ್ದೆ ಯಾರುಗೊತ್ತಾ?!
 ಅಪ್ಪಿ ಶೆಡ್ತಿ ಇವರು ಸವಣಾಲು ಗ್ರಾಮದಲ್ಲಿ ಹಳ್ಳಿದಾದಿಯಾಗಿ ಕೆಲಸ ಮಾಡಿದವರು. ಸುಮಾರು 500ಕ್ಕೂ ಮಿಕ್ಕಿ ಹೆರಿಗೆಯನ್ನು ಮಾಡಿಸಿದ ಕೀತಿ೯ ಇವರಿಗಿದೆ. ಗ್ರಾಮದಲ್ಲಿ ಯಾರೇ ಹೆಂಗಸರು ಗರ್ಭಿಣಿ ಆದರೂ  ಹೆರಿಗೆಗೆ ಅಪ್ಪಿಅಜ್ಜಿ ಬಂದರೆ ಎಲ್ಲರಿಗೂ ಧೈಯ೯, ಹೆರಿಗೆಯಲ್ಲಿ ಅಷ್ಟು ಪರಿಣತಿಯನ್ನು ಅವರು ಪಡೆದಿದ್ದರು. ಆಗಿನ ಕಾಲದಲ್ಲಿ ಸೀಮಿತ ಆಸ್ಪತ್ರೆಗಳಿದ್ದುದರಿಂದ ಊರಿನ ಹಳ್ಳಿ ದಾದಿ (ಸ್ಟಾಪ್ನರ್ಸ್)ಯಾಗಿ ಇವರು ಕಾರ್ಯನಿರ್ವಹಿಸುತ್ತಿದ್ದು ಯಾವುದೇ ಹೊತ್ತಿನಲ್ಲಿ ಕರೆದರೂ ಬರುವುದಿಲ್ಲ ಎಂದು ಹೇಳುವ ರಲ್ಲ, ಹಾಗಾಗಿ ಊರಿನಲ್ಲಿ ಎಲ್ಲರೂ ಇವರನ್ನು ಗೌರವದ ಸ್ಥಾನದಲ್ಲಿ ಕಾಣುತ್ತಾರೆ. ಕಳೆದ ಮೂರು ವಷ೯ಗಳಿಂದ ಅಸೌಖ್ಯಕ್ಕೊಳಗಾದ ಇವರು ಹಿರಿಯ ಮಗ ಶ್ರೀನಿವಾಸ ಶೆಟ್ಟಿ ಯವರ ಮನೆಯಲ್ಲಿದ್ದು, ಜು.13ರಂದು ಈ ಘಟನೆ ನಡೆದಿದೆ.

ಮನೆಯಲ್ಲೇ ಮಲಗಿದ್ದ ಅಜ್ಜಿಗೆ ಮಗ ಶ್ರೀನಿವಾಸ ಶೆಟ್ಟಿ ಹಾಗೂ ಅವರ ಹೆಂಡ್ತಿಯ  ಅಕ್ಕ ನ ಮಗ ಪ್ರದೀಪ್ ಶೆಟ್ಟಿ ಕುಡಿದ ಮತ್ತಿನಲ್ಲಿ ಅಜ್ಜಿಯನ್ನು ಎಳೆದೊಯ್ದು ಹಲ್ಲೆ ನಡೆಸಿ, ಎತ್ತಿ ನೆಲಕ್ಕೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಆನೇಕ ಮಂದಿ ಖಂಡಿಸಿ, ಇದರ ವಿರುದ್ಧ ಪೊಲೀಸರು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಪೊಸ್ಟ್ ಹಾಕಿದ್ದರು.
ವಿಷಯ ಗಮನಕ್ಕೆ ಬರುತ್ತಿದ್ದಂತೆ ಬೆಳ್ತಂಗಡಿ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ, ಎಸ್.ಐ ನಂದಕುಮಾರ್ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಗಳಾದ ಶ್ರೀನಿವಾಸ ಶೆಟ್ಟಿ ಹಾಗೂ ಪ್ರದೀಫ್ ಶೆಟ್ಟಿಯನ್ನು ಬಂಧಿಸಿ, ಕೇಸು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅಜ್ಜಿ ಆಸ್ಪತ್ರೆಗೆ: ಮಗ ಮತ್ತು ಮೊಮ್ಮಗನಿಂದ ಹಲ್ಲೆಗೊಳಗಾದ ಅಜ್ಜಿಯನ್ನು ಪೊಲೀಸರ ಸೂಚನೆಯಂತೆ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.